Pralhad Joshi | ವಿಪಕ್ಷದಲ್ಲಿ ಕೂರಲು ಕಾಂಗ್ರೆಸ್ ಗೆ ಅರ್ಹತೆ ಇಲ್ಲ
ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷದಲ್ಲಿ ಕೂರುವುದಕ್ಕೆ ಅರ್ಹತೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ಭಾರತ್ ಜೋಡೋ ಯಾತ್ರೆ ಬಗ್ಗೆ ವ್ಯಂಗ್ಯವಾಡಿದರು.
ಭಾರತ್ ಜೋಡೋ ಯಾತ್ರೆಯಿಂದ ರಾಹುಲ್ ಗಾಂಧಿ ಗೆ ಸಿದ್ದರಾಮಯ್ಯಗೆ ಆರೋಗ್ಯ ಸುಧಾರಿಸಿದೆ.
ಇಬ್ಬರಿಗೂ ಸ್ವಲ್ಪ ಆರೋಗ್ಯ ಸುಧಾರಿಸಬಹುದು. ಯಾಕಂದ್ರೆ ಅವರಿಗೆ ವಾಕಿಂಗ್ ಆಗ್ತಿದೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ನನ್ನ ವಿರುದ್ಧ ಅಪಪ್ರಚಾರಕ್ಕೆ ಕೋಟಿ ಕೋಟಿ ಖರ್ಚು ಮಾಡ್ತಾರೆ ಎಂದು ರಾಹುಲ್ ಗಾಂಧಿ ಹೇಳಿಕೆಗೆ ಜೋಶಿ ಪ್ರತಿಕ್ರೀಯೆ ನೀಡಿದ್ದು, ರಾಹುಲ್ ಗಾಂಧಿ ವಿರುದ್ಧ ನಾವ್ಯಾಕೆ ಖರ್ಚು ಮಾಡಬೇಕು.
ಇದು ಜನರಿಗೂ ಗೊತ್ತಾಗಿದೆ, ಅವರ ಪಕ್ಷದವರಿಗೂ ಗೊತ್ತಿದೆ. ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕೂರುವುದಕ್ಕೆ ಅರ್ಹತೆ ಇಲ್ಲ.
ಒಂದು ಕಾಲದಲ್ಲಿ 28 ರಾಜ್ಯಗಳಲ್ಲಿ 26 , 27 ರಾಜ್ಯಗಳಲ್ಲಿ ಅವರದೇ ಅಧಿಕಾರ ಇತ್ತು. ಇವತ್ತು ಕೇವಲ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.
ಅದರಲ್ಲಿ ರಾಜಸ್ತಾನ ಇದೀಗ ಅಲುಗಾಡುತ್ತಿದೆ. ಸ್ಪರ್ಧೆ ಮಾಡುವ ಎಲ್ಲ ಚುನಾವಣೆಗಳಲ್ಲಿ ಸೋಲುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಒಂದೂ ಸೀಟ್ ಗೆದ್ದಿಲ್ಲ.
398 ಸೀಟ್ ನಲ್ಲಿ 388 ಸೀಟ್ ನಲ್ಲಿ ಡಿಪಾಸೀಟ್ ಕಳೆದುಕೊಂಡಿದ್ದಾರೆ. ಅವರನ್ನ ನಿಷ್ಪಪ್ರಯೋಜಕ, ಅಪ್ರಯೋಜಕ ಬುದ್ದಿ ಇಲ್ಲ ಅಂತಾ ನಾವು ಹೇಳೋದಿಲ್ಲ ಎಂದು ಹೇಳಿದರು.