Pramod Muthalik | ಅಲೋಕ್ ಕುಮಾರ್ ಕ್ಷಮೆ ಕೇಳಬೇಕು
ಬೆಳಗಾವಿ : ಸಾರ್ವಜನಿಕ ಗಣೇಶೋತ್ಸವ ಮಂಟಪಗಳಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಕೆಗೆ ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆಯಬೇಕೆಂಬ ಎಡಿಜಿಪಿ ಅಲೋಕ್ಕುಮಾರ್ ಹೇಳಿಕೆಯನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ. ಅಲ್ಲದೇ ಅಲೋಕ್ ಕುಮಾರ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿರುವ ಅವರು, ಎಡಿಜಿಪಿಯವರೇ ಯಾವ ದೇಶದಲ್ಲಿ ಇದ್ದೀವಿ ನಾವು ? 75 ವರ್ಷ ಆಯ್ತು ಸ್ವಾತಂತ್ರ್ಯ ಸಿಕ್ಕಿ, ಸ್ವಾತಂತ್ರ್ಯ ನಮಗೆ ಸಿಗಬೇಕಾದ್ರೆ ತಿಲಕ್, ಸಾವರ್ಕರ್ ಕಾರಣ ಎಂಬುದು ನಿಮಗೆ ಗೊತ್ತಿಲ್ವಾ ? ಎಲ್ಲದಕ್ಕೂ ಪರ್ಮಿಷನ್ ತಗೆದುಕೊಳ್ಳಬೇಕಾ ಎಂದು ಆಕ್ರೋಶ ಹೊರಹಾಕಿದರು.

ಇನ್ನು ಸಾವರ್ಕರ್ ತಮ್ಮ ಆಯುಷ್ಯದಲ್ಲಿ ಅರ್ಧ ಆಯುಷ್ಯ ಜೈಲಿನಲ್ಲಿ ಕಳೆದ ವ್ಯಕ್ತಿ. ಸ್ವಾತಂತ್ರ್ಯದಲ್ಲಿ ಹೋರಾಟ ಮಾಡಿದ ವ್ಯಕ್ತಿಗಾಗಿ ಪರ್ಮಿಷನ್ ತಗೆದುಕೊಳ್ಳಬೇಕಾ ನಾವು? ತಾವು ಕ್ಷಮೆ ಕೇಳಬೇಕು ಅಂತಾ ನಾನು ಹೇಳುತ್ತಿದ್ದೇನೆ. ಈ ರೀತಿ ನಿಮ್ಮ ಹೇಳಿಕೆಯಿಂದ ದೇಶಭಕ್ತಿ, ಸ್ವಾತಂತ್ರ್ಯ, ಸಂವಿಧಾನ ಮೇಲೆ ಪರಿಣಾಮ ಆಗುತ್ತದೆ. ಈ ರೀತಿಯ ನಿಮ್ಮ ಹೇಳಿಕೆ ಸರಿಯಲ್ಲ, ದೇಶಭಕ್ತರಿಗೆ ಅವಮಾನ ಮಾಡುತ್ತಿದ್ದೀರಿ ನೀವು. ಸಾವರ್ಕರ್ ಬಗ್ಗೆ ವಿರೋಧ ಮಾಡ್ತಾರಂದ್ರೆ ಅರ್ಥ ಸಾವರ್ಕರ್ ದೇಶಭಕ್ತಿ ಕಡಿಮೆ ಆಗಿಲ್ಲ, ಆಗೋದೂ ಇಲ್ಲ. ನೀವು ನಿಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು. ಈ ರೀತಿ ಹೇಳಿಕೆ ಎಂದೂ ಕೊಡಲು ಹೋಗಬೇಡಿ ಎಂದು ಮನವಿ ಮಾಡಿಕೊಂಡರು.








