ರಾಜ್ಯದಲ್ಲಿ ಧರ್ಮ ದಂಗಲ್ : ಹಲಾಲ್ ಮುಕ್ತ ದೀಪಾವಳಿ
ಹುಬ್ಬಳ್ಳಿ : ರಾಜ್ಯದಲ್ಲಿ ಧರ್ಮ ದಂಗಲ್ ಮತ್ತೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಹಲಾಲ್ ಮುಕ್ತ ದೀಪಾವಳಿ ಆಚರಣೆ ಮಾಡಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕರೆ ಕೊಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಈ ಬಾರಿ ಹಿಂದೂ ಸಮಾಜ ಹಲಾಲ್ ಮುಕ್ತ ದೀಪಾವಳಿಯನ್ನು ಮಾಡಬೇಕು.
ಕಬ್ಬು, ಹೂ, ಹಣ್ಣು, ಪೂಜೆ ಸಾಮಾಗ್ರಿಗಳು ಸೇರಿದಂತೆ ಹಬ್ಬದ ವಸ್ತುಗಳನ್ನು ಹಿಂದೂ ವ್ಯಾಪಾರಿಗಳಿಂದ ಖರೀದಿ ಮಾಡಬೇಕು.
ಅಲ್ಲದೇ ಮುಸ್ಲಿಂ ವ್ಯಾಪಾರಿಗಳಿಂದ ಹಲಾಲ್ ಸರ್ಟಿಫಿಕೇಟ್ ಸಾಮಗ್ರಿಗಳನ್ನು ಖರೀದಿಸಬಾರದು, ಇದು ಅಶಾಸ್ತ್ರವಾಗುತ್ತದೆ. ಇದು ನಮ್ಮ ಧರ್ಮಕ್ಕೆ ಅಪಮಾನ ಮಾಡಿದಂತೆ ಎಂದು ಮುತಾಲಿಕ್ ಹೇಳಿದ್ದಾರೆ.
ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಹಲಾಲ್ ಹಣವನ್ನು ಬಳಸಲಾಗುತ್ತಿದೆ. ಹಲವು ಗಲಭೆಗಳಿಗೆ ಹಲಾಲ್ ನಿಂದಲೇ ಹಣ ವರ್ಗಾವಣೆ ಆಗುತ್ತದೆ.
ನಾವು ಖರೀದಿಸುವ ಹಲಾಲ್ ಸರ್ಟಿಫಿಕೇಟ್ ನೀಡುವ ಸಾಮಗ್ರಿಗಳನ್ನು ಖರೀದಿ ಮಾಡುವುದರಿಂದ ರಾಕ್ಷಸರು ಹುಟ್ಟುತ್ತಿದ್ದಾರೆ ಎಂದು ಮುತಾಲಿಕ್ ಹೇಳಿದ್ದಾರೆ.