ಪರರಾಜ್ಯದ ಮುಸ್ಲಿಂ ಕ್ಷೌರಿಕರ ಅಂಗಡಿ ಕಿತ್ತು ಬಿಸಾಕಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ರಾಜ್ಯದ ಹಿಂದೂ ಕ್ಷೌರಿಕರಿಗೆ ಕರೆ ಕೊಟ್ಟಿದ್ದಾರೆ..
ಇತ್ತೀಚೆಗೆ ಬಾಗಲಕೋಟೆಗೆ ಭೇಟಿ ನೀಡಿದ್ದ ಮುತಾಲಿಕ್ ಅವರು ಬಾಗಲಕೋಟೆ ಕ್ಷೌರಿಕರು ಪರರಾಜ್ಯದ ಮುಸ್ಲಿಂರು ಬಂದು ಸಲೂನ್ ಶಾಪ್ ಹಾಕಿದ್ದಾರೆ..
ಇದರಿಂದ ನಮಗೆ ಹೊಡೆತ ಬೀಳುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು.. ಈ ವೇಳೆ ಗರಂ ಆದ ಮುತಾಲಿಕ್ , ಅಂಗಡಿ ಕಿತ್ತು ಬಿಸಾಕಿ ಎಂದು ಆಕ್ರೋಶ ಹೊರಹಾಕಿದ್ದಾರೆ..
ನಮ್ಮ ಹೊಟ್ಟೆ ಮೇಲೆ ಹೊಡಿತಾರೆ ಅಂದರೆ ಹೇಗೆ.. ಬೇರೆ ಉದ್ಯೋಗ ನಮಗೆ ಬರೋದಿಲ್ಲ ಎಂದು ಡಿಸಿ ಎಸ್ ಪಿ ಅವರನ್ನು ಕೇಳಿ… ಅವರೆಲ್ಲ ಬಾಂಗ್ಲಾದೇಶವರು ಎಲ್ಲಿಂದಲೋ ಬರ್ತಾರೆ ಏನೊ ಮಾಡ್ತಾರೆ ಅಂದರೆ ಹೇಗೆ.. ಅವರ ಅಂಗಡಿಗಳನ್ನು ಒಡೆದು ಚಿಂದಿ ಮಾಡಿ ಎಂದು ಕರೆ ಕೊಟ್ಟಿದ್ದಾರೆ..
ಕ್ಷೌರಿಕರಿಗೆ ಕ್ಷೌರ ಮಾಡೋದು ಬಿಟ್ಟು ಬೇರೆ ಏನು ಗೊತ್ತಿಲ್ಲ.. ಇವರೆಲ್ಲ ಬಾಂಗ್ಲಾದೇಶದವರು ಇಲ್ಲಿ ಬಂದು ಅಂಗಡಿ ಹಾಕುತ್ತಿದ್ದಾರೆ.. ಬಾಗಲಕೋಟೆ ಹಾಗೂ ಕೆರೂರಿನಲ್ಲಿ. ಆರು ಅಂಗಡಿ ಆಗಿವೆ ಅಂತ ಹೇಳ್ತಿದ್ದಾರೆ… ಒಂದು ವಾರದಲ್ಲಿ ಅವರ ಅಂಗಡಿ ತೆರವುಗೊಳಿಸಬೇಕು.. ಇಲ್ಲದಿದ್ದರೆ ಅವರ ಅಂಗಡಿಗಳನ್ನು ಉಡಾಯಿಸಿ ಬಿಸಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ..