Pramod Muthalik | ಸ್ವಯಂ ರಕ್ಷಣೆಗೆ ಹಿಂದೂ ಸಮಾಜ ಸಿದ್ಧವಾಗಬೇಕಿದೆ
ಧಾರವಾಡ : ಸ್ವಯಂ ರಕ್ಷಣೆಗೆ ಹಿಂದೂ ಸಮಾಜ ಸಿದ್ಧವಾಗಬೇಕಿದೆ ಎಂದು ಶ್ರೀ ರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆಯನ್ನು ಪ್ರಮೋದ್ ಮುತಾಲಿಕ್ ಖಂಡಿಸಿದ್ದು, ಈ ಕೌರ್ಯ ಹದ್ದುಬಸ್ತಿನಲ್ಲಿಡುವ ಕಾರ್ಯ ಸರ್ಕಾರ ಕೂಡಲೇ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರ ಈ ವಿಷಯದಲ್ಲಿ ವಿಫಲ ಆಗುತ್ತಿದೆ. ಕೊಲೆ, ಹಲ್ಲೆ, ಗಲಾಟೆಯಾದಾಗ ಉಗ್ರವಾದ ಹೇಳಿಕೆಗಳು ಬರುತ್ತಾವೆ, ಆದರೆ ಮುಂದೆ ಏನು..?
ಇನ್ನುವರೆಗೆ ಯಾವುದೇ ರೀತಿಯ ಕಠಿಣ ಪ್ರಕ್ರಿಯೆ ನಡೆದಿಲ್ಲ. ಇದೇ ಕಾರಣಕ್ಕೆ ಪ್ರವೀಣ ಹತ್ಯೆ ಆಗಿದೆ.
ಇದು ಕಾನೂನು, ಸರ್ಕಾರದ ವೈಫಲ್ಯ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಇನ್ನು ಬಿಜೆಪಿಗೆ ಹಿಂದೂಗಳ ಸುರಕ್ಷತೆ ಕಾಳಜಿಯಿದ್ದಲ್ಲಿ ಎಸ್ಡಿಪಿಐ, ಪಿಎಫ್ಐ ಬ್ಯಾನ್ ಮಾಡಬೇಕು.

ಹತ್ಯೆ ಹಿಂದೆ ಕೇರಳದ ಮೂಲ ಅಂತಾ ಹೇಳುತ್ತಿದ್ದಾರೆ.
ಮುಸ್ಲಿಂರು ಮಾಡಿರೋ ಲಕ್ಷಾಂತರ ಕೊಲೆಗಳಿಗೆ ನಾವು ತಿರುಗಿ ಬಿದ್ರೆ ದೇಶದಲ್ಲಿ ಒಬ್ಬನೂ ಮುಸ್ಲಿಂ ಇರಬಾರದು.
ಆದರೆ ಆ ಮಾನಸಿಕತೆ ಇರಬಾರದು, ಕೊಲೆಗೆ ಕೊಲೆಯೇ ಉತ್ತರ ಅಲ್ಲ. ನ್ಯಾಯಕ್ಕೆ ನ್ಯಾಯಾಲಯ ಇದೆ, ಪೊಲೀಸ್ ಠಾಣೆ ಇದೆ.
ಸಂವಿಧಾನ ಬದ್ಧವಾದ ಹೋರಾಟಕ್ಕೆ ಅವಕಾಶ ಇದೆ.
ಮುಲ್ಲಾ ಮೌಲ್ವಿಗಳು ಎಸ್ಡಿಪಿಐ, ಪಿಎಫ್ಐ ಹದ್ದುಬಸ್ತಿನಲ್ಲಿ ಇಡಬೇಕು.
ಇಲ್ಲದೇ ಹೋದಲ್ಲಿ ಹಿಂದೂ ಸಮಾಜ ತಿರುಗಿ ಬೀಳುತ್ತದೆ. ಸ್ವಯಂ ರಕ್ಷಣೆಗೆ ಹಿಂದೂ ಸಮಾಜ ಸಿದ್ಧವಾಗಬೇಕಿದೆ ಎಂದು ಕರೆಕೊಟ್ಟಿದ್ದಾರೆ.








