ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಪ್ರಮೋದ್ ಮುತಾಲಿಕ್ Saaksha Tv
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ ಮಾಡಿದ್ದಾರೆ
ಭಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಸಂಬಂಧ, ತಾಜ್ ವೆಸ್ಟ್ ಎಂಡ್‍ನಲ್ಲಿ ಬೊಮ್ಮಾಯಿಯವರನ್ನು ಮುತಾಲಿಕ್ ಅವರು ಭೇಟಿಯಾಗಿದ್ದಾರೆ. ಹರ್ಷನ ಕೊಲೆಗೆ ಸಂಬಂಧಿಸಿದಂತೆ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಬೇಡಿಕೆಗಳ ಮನವಿ ಸಲ್ಲಿಸಿದ ಮುತಾಲಿಕ್ ಅವರು, ಹರ್ಷನ ಕೊಲೆಗೆ ಕಾರಣರಾದವರನ್ನು ಶೀಘ್ರದಲ್ಲೇ ಎಂದು ಆಗ್ರಹಿಸಿದರು.
ಅಲ್ಲದೆ ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಲು ಮನವಿ ಮಾಡಿದ್ದು, ಹಿಂದೂ ಮುಖಂಡರು, ಕಾರ್ಯಕರ್ತರಿಗೆ ಸೂಕ್ತ ಭಧ್ರತೆ ಕೊಡಬೇಕು. SDPI, PIFI , ಸಿಎಫ್ ಐ ನಿಷೇಧಿಸಬೇಕು. ಈ ಸಂಘಟನೆಗಳ ಮುಖಂಡರನ್ನು ಬಂಧಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಪ್ರಮೋದ್ ಮುತಾಲಿಕ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಿನ್ನೆ ನಡೆದ ಘಟನೆ ಅತ್ಯಂತ ದುರದೃಷ್ಟಕರ. ಕರ್ನಾಟಕದಲ್ಲಿ ಅಶಾಂತಿ ಉಂಟುಮಾಡಬೇಕು ಅಂತ ಈ ರೀತಿ ಮಾಡಿದ್ದಾರೆ. ಇವತ್ತು ಶ್ರೀರಾಮ ಸೇನೆ, ಇತರೆ ಹಿಂದೂಪರ ಸಂಘಟನೆಗಳು ಸಿಎಂ ಅವರನ್ನು ಭೇಟಿ ಮಾಡಿದ್ವಿ. ಮೂವರುನ್ನು ಅರೆಸ್ಟ್ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದೇವೆ. ಅವರ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡಬೇಕು ಎಂದು ಕೇಳಿಕೊಂಡಿದ್ದೇನೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ SDPI, PIFI ಹಾಗೂ CFI ಮೇಲೆ ಕ್ರಮ ಜರುಗಿದಬೇಕು. ಇವರನ್ನು ಬಂಧಿಸಬೇಕು. ಹಿಂದೂ ಸಂಘಟನೆಗಳಿಗೆ ಕಾರ್ಯಕರ್ತರಿಗೆ ರಕ್ಷಣೆ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ಎಲ್ಲವನ್ನೂ ಪರಿಶೀಲಿಸಿ ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.









