Pramod Muthalik | ಎಲ್ಲ ಗಲಾಟೆಗಳಿಗೆ ಬಿಜೆಪಿಯೂ ಕಾರಣ
ಧಾರವಾಡ : ಭದ್ರಾವತಿಯಲ್ಲಿ ಚಾಕು ಇರಿತ ಆಗಿದೆ. ಬಿಜೆಪಿಯವರು ಬರೀ ಕಠಿಣ ಕ್ರಮ ಅಂತಷ್ಟೇ ಹೇಳುತ್ತಾರೆ. ಈ ಎಲ್ಲ ಗಲಾಟೆಗಳಿಗೆ ಬಿಜೆಪಿಯೂ ಕಾರಣ ಶಿವಮೊಗ್ಗದಲ್ಲಿ ಗಲಾಟೆ ಆಗುತ್ತಿದೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿನ ಬೆಳವಣಿಗೆಗಳ ಬಗ್ಗೆ ಧಾರವಾಡದಲ್ಲಿ ಮಾತನಾಡಿರುವ ಪ್ರಮೋದ್ ಮುತಾಲಿಕ್, ಅದು ಮಾಜಿ ಸಿಎಂ ಊರು, ಹಾಲಿ ಗೃಹ ಸಚಿವರ ಊರು, ಇಷ್ಟೆಲ್ಲ ಆದರೂ ಯಾಕೆ ಬಿಜೆಪಿ ಗಮನಿಸುತ್ತಿಲ್ಲ. ಇನ್ನಾದರೂ ಹದ್ದುಬಸ್ತಿನಲ್ಲಿಡಬೇಕು. ನಿಮ್ಮ ಕೈಯಲ್ಲಿ ಆಗದೇ ಇದ್ರೆ ಮನೆಗೆ ಹೋಗಿ, ಕಠಿಣ ಕ್ರಮ ಅನ್ನೋದು ಹಾಸ್ಯಸ್ಪದ ಆಗಿ ಹೋಗಿದೆ. ಹದ್ದು ಬಸ್ತಿನಲ್ಲಿ ಇಡಲು ಆಗದಿದ್ದರೆ ನಾವು ಮಾಡಿ ತೋರಿಸುತ್ತೇವೆ ಎಂದಿದ್ದಾರೆ.

ಸಾರ್ವಕರ ವಿರೋಧ ಮಾತನಾಡುತ್ತಿದ್ದಾರೆ. ಈ ವಿರೋಧ ಶುರು ಮಾಡಿದ್ದು ಕಾಂಗ್ರೆಸ್, ಓರ್ವ ಪ್ರಖರ ಹಿಂದೂವಾದಿ ಮತ್ತು ರಾಷ್ಟ್ರೀಯವಾದಿ ಸಾರ್ವಕರ್. ಕಾಂಗ್ರೆಸ್‌ಗೆ ನೆಹರು, ಇಂದಿರಾಗಾಂಧಿ, ಸೋನಿಯಾ, ರಾಹುಲ್ ಮಾತ್ರ ಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಬೇಕಾಗಿಲ್ಲ. ಇದು ಕಾಂಗ್ರೆಸ್ ಹಾಕಿದ ಬೀಜ, ಅದು ಈಗ ಮುಸ್ಲಿಂರು ಹುಳುಗಳಂತೆ ಹೊರ ಬರುತ್ತಿದ್ದಾರೆ. ಸಾವರ್ಕರ ಬಗ್ಗೆ ಮಾತನಾಡಲು ಕಾಂಗ್ರೆಸ್, ಮುಸ್ಲಿಂರಿಗೆ ಹಕ್ಕಿಲ್ಲ ಎಂದು ಮುತಾಲಿಕ್ ಕಿಡಿಕಾರಿದರು.
ಇನ್ನು ಸಿದ್ದರಾಮಯ್ಯ ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೊ ಯಾಕೆ ಅಂತಾ ಕೇಳಿದ್ದಾರೆ. ನಮ್ಮಲ್ಲೊ ಹಿಂದು, ಮುಸ್ಲಿಂ ಏರಿಯಾ ಅಂತಿಲ್ಲ, ಎಲ್ಲವೂ ಭಾರತೀಯ ಏರಿಯಾ. ಮುಸ್ಲಿಂರು ಬಾಯಿ ಮುಚ್ಚಿಕೊಂಡು ಇರುವುದನ್ನು ಕಲಿಯಬೇಕು ಎಂದು ಕಿಡಿಕಾರಿದರು.








