ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೂ ಕೊರೊನಾ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ. ಈ ಕುರಿತು ಸ್ವತಃ ಪ್ರಣಬ್ ಮುಖರ್ಜಿ ಅವರೇ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. “ ಬೇರೆ ಸಮಸ್ಯೆಗೆ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡ ಸಂದರ್ಭದಲ್ಲಿ ನನಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ನನ್ನ ಜೊತೆಗೆ ಸಂಪರ್ಕಕ್ಕೆ ಬಂದಿದ್ದ ಎಲ್ಲರೂ ಕ್ವಾರಂಟೈನ್ ಒಳಗಾಗಿ” ಎಂದು ತಿಳಿಸಿದ್ದಾರೆ. 
ದಿನೇ ದಿನೇ ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚುತ್ತಲೇ ಇದೆ. ಸಿನಿಮಾ ತಾರೆಯರೂ , ಜನಸಾಮಾನ್ಯರು, ಜನಪ್ರತಿನಿಧಿಗಳನ್ನೂ ಈ ಕೊರೊನಾ ಮಹಾಮಾರಿ ಬಿಟ್ಟಿಲ್ಲ. ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ , ರಾಜ್ಯದ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಸೋಂಕು ತಗುಲಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಬಾಲಿವುಡ್ ನ ಬಿಗ್ ಬಿ ಅವರ ಕುಟುಂಬವನ್ನೂ ಬಿಟ್ಟಿರಲಿಲ್ಲ ಈ ಮಹಾಮಾರಿ. ರಾಜ್ಯದಲ್ಲಿ ರಾಮುಲು, ಸಿದ್ದರಾಮಯ್ಯ, ಸುಮಲತಾ, ನಟ ಧ್ರುವ ಸರ್ಜಾ ಹೀಗೆ ಎಲ್ಲರಿಗೂ ಕೊರೊನಾ ಕಂಟಕ ಎದುರಾಗಿತ್ತು. ಇದೀಗ ಮಾಜಿ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಅವರಿಗೂ ಸೋಂಕು ದೃಢಪಟ್ಟಿರುವುದು ದೇಶದ ಜನರ ಆತಂಕವನ್ನು ಹೆಚ್ಚಿಸಿದೆ.








