ಪ್ರಶಾಂತ್ ನೀಲ್..! ಭಾರತೀಯ ಚಿತ್ರರಂಗವನ್ನೇ ಚಂದನವನದತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ. ಕೆಜಿಎಫ್ ಚಾಪ್ಟರ್-2 ಬಳಿಕ ಪ್ರಶಾಂತ್ ನೀಲ್ ರ ಮುಂದಿನ ಸಿನಿಮಾ ಯಾವುದು..? ಅನ್ನೋ ಕುತೂಹಲದ ಪ್ರಶ್ನೆ ಸಿನಿರಸಿಕರಲ್ಲಿ ಮೂಡಿತ್ತು. ಕೆಲ ದಿನಗಳ ಹಿಂದೆ ಮಹೇಶ್ ಬಾಬು, ಜೂನಿಯರ್ ಎನ್ ಟಿಆರ್ ಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳ್ತಾರೆ ಅನ್ನೋ ಮಾತುಗಳೂ ಕೇಳಿ ಬಂದಿತ್ತು. ಇದೀಗ ಜ್ಯೂನಿಯರ್ ಎನ್ ಟಿಆರ್ ಜೊತೆಗೆ ಕೆಜಿಎಫ್ ಡೈರೆಕ್ಟರ್ ಸಿನಿಮಾ ಮಾಡುವುದು ಬಹುತೇಕ ಖಚಿತವಾಗಿದೆ.
ಹೌದು..! ಕೆ.ಜಿ.ಎಫ್ ಚಾಪ್ಟರ್-2 ಬಳಿಕ ಈ ಬಿಗ್ ಕಾಂಬಿನೇಷನ್ ನ ಸಿನಿಮಾ ಸೆಟ್ಟೇರಲಿದ್ದು, ಮೈತ್ರಿ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಲಿದೆ. ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಎನ್ ಟಿಆರ್ ನಟಿಸುತ್ತಿದ್ದು, ಬಳಿಕ ತ್ರಿವಿಕ್ರಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಚಿತ್ರಗಳ ನಂತರ ಪ್ರಶಾಂತ್ ನೀಲ್ ಸಿನಿಮಾ ಸೆಟ್ಟೇರಲಿದೆ ಎನ್ನಲಾಗ್ತಿದೆ.







