ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ವಿಚಾರವಾಗಿ ಶ್ರೀಲಂಕಾದ ಕ್ಯಾಸಿನೋಗೆ ಶಾಸಕ ಜಮೀರ್ ಹೋಗಿದ್ದರು ಎಂದು ಫೇಸ್ಬುಕ್ನಲ್ಲಿ ವಿಡಿಯೋ ಹಂಚಿಕೊಂಡಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಮಾನನಸ್ಟ ದಾಖಲಾಗಿದೆ.
ತಮ್ಮ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ ಪ್ರಶಾಂತ್ ಸಂಬರಗಿ ವಿರುದ್ಧ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಮಾನನಸ್ಟ ಕೇಸ್ ದಾಖಲಿಸಿದ್ದಾರೆ.
ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಜಮೀರ್ ದೂರು ದಾಖಲಿಸಿದ್ದು, ಪೊಲೀಸರು ದೂರಿನ ಆಧಾರದ ಅನ್ವಯ ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ. ಮಾಧ್ಯಮಗಳಲ್ಲಿ ಬಂದ ಸಂಬರಗಿ ಮಾತಿನ ವಿಡಿಯೋಗಳನ್ನು ತಮ್ಮ ದೂರಿನೊಂದಿಗೆ ಜಮೀರ್ ಸಾಕ್ಷಿಯಾಗಿ ನೀಡಿದ್ದಾರೆ.
ಸಂಬರಗಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲು ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳುವಂತೆ ತಮ್ಮ ವಕೀಲರೊಂದಿಗೆ ಜಮೀರ್ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
2019ರ ಜುಲೈ 8ರಂದು ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಕ್ಯಾಸಿನೋ ಉದ್ಘಾಟನೆ ವೇಳೆ ಸಂಜನಾ ಮತ್ತು ಜಮೀರ್ ಇದ್ದರು ಎಂದು ಪ್ರಶಾಂತ್ ಸಂಬರಗಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.








