Prasidh Krishna | 10 ಓವರ್ಸ್.. 12 ರನ್ ಗಳು.. 4 ವಿಕೆಟ್ಸ್.. ಕೆರಿಬಿಯನ್ಸ್ ಪಾಲಿನ ಕಿಂಕರ..
10 ಓವರ್ಸ್.. 12 ರನ್ ಗಳು.. 4 ವಿಕೆಟ್ಸ್.. ಇದು ಅಹಮದಾಬಾದ್ ನ ನರೇಂದ್ರ ಮೋದಿ ಮೈದಾನದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣರ ಅದ್ಭುತ ಪ್ರದರ್ಶನ.
ಹೌದು..! ಬುಧವಾರ ನರೇಂದ್ರ ಮೋದಿ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೆರಿಬಿಯನ್ಸ್ ಪಾಲಿಗೆ ಕಿಂಕರನಾಗಿ ಕಾಡಿದರು.
ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 44 ರನ್ ಗಳಿಂದ ಜಯ ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದೊಂದಿಗೆ ಗೆದ್ದುಕೊಂಡಿದೆ.
ಆದ್ರೆ ಟೀಂ ಇಂಡಿಯಾ ಈ ಸರಣಿ ಗೆಲ್ಲುವಲ್ಲಿ ವೇಗಿ ಪ್ರಸಿದ್ಧ್ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದಾರೆ.
ಮೋದಿ ಮೈದಾನದಲ್ಲಿ 10 ಓವರ್‌ಗಳನ್ನು ಎಸೆದ ಪ್ರಸಿದ್ಧ್ ಕೃಷ್ಣ 3 ಮೇಡನ್ ಸಹಿತ 12 ರನ್ ನೀಡಿ ನಾಲ್ಕು ವಿಕೆಟ್ ಪಡೆದು ಮಿಂಚಿದರು.
ಈ ಪಂದ್ಯದಲ್ಲಿ ಪ್ರಸಿದ್ಧ್ ತಮ್ಮ ಅಮೋಘ ಲೈನ್ ಲೆಂಗ್ತ್ ಎಸೆತಗಳಿಂದ ವಿಂಡೀಸ್ ಬ್ಯಾಟರ್‌ಗಳ ಬೆದರಿಸಿದರು.
ಪ್ರಸಿದ್ಧ್ ಕೃಷ್ಣ ಈ ಪಂದ್ಯದಲ್ಲಿ ಬ್ರಾಂಡನ್ ಕಿಂಗ್, ಡ್ಯಾರೆನ್ ಬ್ರಾವೋ, ಪೂರನ್ ಮತ್ತು ರೋಚ್ ವಿಕೆಟ್ ಪಡೆದರು.
ಇದರೊಂದಿಗೆ ಪ್ರಸಿದ್ಧ್ ಕೃಷ್ಣ, ಏಕದಿನ ಕ್ರಿಕೆಟ್ ನಲ್ಲಿ ಅತಿ ಕಡಿಮೆ ರನ್ ಗಳನ್ನು ಬಿಟ್ಟುಕೊಟ್ಟು ನಾಲ್ಕು ವಿಕೆಟ್ ಗಳನ್ನ ಪಡೆದ ಭಾರತದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧ ಸ್ಟುವರ್ಟ್ ಬಿನ್ನಿ 4 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು.









