Prathap simha
‘ಮಂಡ್ಯದ ಗಂಡಿಗೆ ‘ಮಿಸ್ ಯೂ ಅಣ್ಣ’ ಎಂದ ಪ್ರತಾಪ್ ಸಿಂಹ..!
ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ ಎರಡು ವರ್ಷಗಳು ಕಳೆದಿದೆ. ಇಂದು ಅಂಬಿ ಅವರ 2ನೇ ವರ್ಷದ ಪುಣ್ಯ ತಿಥಿ. ಹೀಗಾಗಿ ಇಂದು ಚಂದನವನದ ದಿಗ್ಗಜನನ್ನ ಅಭಿಮಾನಿಗಳು , ಚಿತ್ರರಂಗದವರು ಸ್ಮರಿಸುತ್ತಿದ್ದಾರೆ. ಕುಟುಂಬದವರು ಮತ್ತು ತೀರ ಆಪ್ತರು ಅಂಬರೀಶ್ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿ ಅಂಬರೀಷ್ ಅವರನ್ನ ಸ್ಮರಿಸಿದ್ದಾರೆ. ಇನ್ನೂ ರಾಜಕೀಯ ಮುಖಂಡರು ಸಹ ಅಂಬರೀಷ್ ಅವರನ್ನ ನೆನೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡ್ತಾಯಿದ್ದಾರೆ.
ಪ್ರೀತಿ ಒಂದೇ ಅಂಬರೀಶ್ ಸಂಪಾದಿಸಿರುವ ಆಸ್ತಿ : ಸುಮಲತಾ ಅಂಬರೀಶ್..!
ಅಂಬರೀಶ್ ಅವರ ಎರಡನೇ ಪುಣ್ಯಸ್ಮರಣೆ ಹಿನ್ನೆಲೆ ಸಂಸದ ಪ್ರತಾಪ್ ಸಿಂಹ ಅವರು ಸಹ ಟ್ವೀಟ್ ಮಾಡಿದ್ದಾರೆ. ಅಂಬರೀಶ್ ಜೊತೆಗಿನ ಫೋಟೋ ಹಂಚಿಕೊಂಡಿರುವ ಸಂಸದ ಪ್ರತಾಪ್ ಸಿಂಹ, ‘ಎಲ್ಲರಿಂದಲೂ ಪ್ರೀತಿಸಲ್ಪಡುವುದಕ್ಕೂ, ಎಲ್ಲರೂ ಭಯಪಡುವುದಕ್ಕೂ ಬಹಳ ವ್ಯತ್ಯಾಸವಿದೆ. ಎಲ್ಲರ ಪ್ರೀತಿ, ಅಭಿಮಾನ ಗಳಿಸುವಂಥದ್ದಾಗಿತ್ತು ಅಂಬರೀಶಣ್ಣನ ವ್ಯಕ್ತಿತ್ವ. ಎಲ್ಲರಿಗೂ ಒಬ್ಬರೋ, ಇಬ್ಬರೋ ಅಥವಾ ನಾಲ್ಕೈದು ಜನರೋ ಆಪ್ತ ಸ್ನೇಹಿತರಿರುತ್ತಾರೆ. ಆದರೆ ನೂರಾರು ಜನ ಆಪ್ತ ಸ್ನೇಹಿತರಿದ್ದಿದ್ದು, ಭೇಟಿಯಾದವರಿಗೆಲ್ಲ ನನ್ನ ಆಪ್ತರು ಎಂಬ ಫೀಲಿಂಗ್. ಶಾಶ್ವತವಾದ ನೆನಪಿನ ಬುತ್ತಿ ಕೊಡುತ್ತಿದ್ದಿದ್ದು ಅಂಬರೀಶಣ್ಣ ಮಾತ್ರ ಮಿಸ್ ಯು ಅಣ್ಣ’ ಎಂದು ಟ್ವೀಟ್ ಮಾಡಿದ್ದಾರೆ. ನವೆಂಬರ್ 24, 2018ರಲ್ಲಿ ಅಂಬರೀಶ್ ಅವರು ನಮ್ಮನ್ನೆಲ್ಲ ಅಗಲಿದ್ದರು. ಅಂಬಿ ಅಗಲಿಕೆಯಿಂದ ಸ್ಯಾಂಡಲ್ ವುಡ್ ಗೆ ತುಂಬಲಾರದ ನಷ್ಟ ಉಂಟಾಗಿತ್ತು.
Prathap simha
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel