ಹಿಂದೂ ಕಾರ್ಯಕರ್ತ , ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಭೀಕರ ಹತ್ಯೆ ಪ್ರಕರಣ ಇಡೀ ದಕ್ಷಿಣ ಕನ್ನಡದಲ್ಲಿ ಆಕ್ರೋಶದ ಕಿಚ್ಚು ಹೆಚ್ಚಿಸಿದೆ.. ಹಿಂದೂ ಕಾರ್ಯಕರ್ತರು , ಬಿಜೆಪಿ ಕಾರ್ಯಕರ್ತರು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧವೇ ಕೆಂಡ ಕಾರುತತ್ತಿದ್ದಾರೆ.. ಕರಾವಳಿ ಕಾದ ಕೆಂಡದಂತಾಗಿದೆ..
ಇದೇ ಪ್ರಕರಣದಲ್ಲಿ ರಾಜಕೀಯ ತಿಕ್ಕಾಟವೂ ಶುರುವಾಗಿದೆ.. ಇದೀಗ ಈ ಬಗ್ಗೆ ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಪ್ರತಿಕ್ರಿಯೆ ನೀಡಿದ್ದು , ಜಿಲ್ಲೆಯಲ್ಲಿ ನಡೆಯುವ ಹತ್ಯೆಗಳ ಹಿಂದಿರುವ ದುಷ್ಟಶಕ್ತಿ ಯಾರೆಂದು ಪತ್ತೆ ಹಚ್ಚಿ, ಕಠಿಣ ಶಿಕ್ಷೆ ನೀಡಿದಾಗ ಮಾತ್ರ ಇಂತಹ ಘಟನೆಗಳು ಮರುಕಳಿಸುವುದು ನಿಲ್ಲುತ್ತದೆ ಎಂದಿದ್ದಾರೆ..
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆದಿರುವ ಘಟನೆಗಳಲ್ಲಿ ಹತ್ಯೆಯಾದ ಯುವಕರು ಮತ್ತು ಜೈಲಿಗೆ ಹೋದ ಯುವಕರು, ಅವರು ಹಿಂದೂ ಸಮುದಾಯದವರೇ ಇರಲಿ ಅಥವಾ ಮುಸ್ಲಿಂ ಸಮುದಾಯದವರೇ ಇರಲಿ ಎಲ್ಲರೂ ದುರ್ಬಲ ವರ್ಗದವರೇ ಆಗಿದ್ದಾರೆ ಎಂದರು.
ಕೆಲವು ರಾಜಕೀಯ ಮುಖಂಡರ ಕೋಮುದ್ವೇಷದ ಪ್ರಚೋದನಕಾರಿ ಭಾಷಣಗಳು ಜಿಲ್ಲೆಯಲ್ಲಿಯೂ ಅಶಾಂತಿಯ ವಾತವರಣ ವನ್ನು ಸೃಷ್ಟಿಸಿವೆ ಮತ್ತು ಅಮಾಯಕರ ಕೊಲೆಗೂ ಕಾರಣವಾಗಿವೆ. ಪ್ರಚೋದನಕಾರಿ ಭಾಷಣ ಮಾಡುವವರು ಗಲಭೆಗಳ ಹಿಂದೆ ಇರುತ್ತಾರೆ. ಆದರೆ ಇಂತಹ ಪ್ರಕರಣ ನಡೆದಾಗ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು, ಕೆಲವು ಅಮಾಯಕರು ಬಲಿಯಾಗುವುದು,ಜೈಲು ಸೇರುವುದು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ..
ಮಂಗಳವಾರ ರಾತ್ರಿ ಪ್ರವೀಣ್ ಕುಮಾರ್ ನೆಟ್ಟಾರುರನ್ನ ದುಷ್ಕರ್ಮಿಗಳ ಬರ್ಬರವಾಗಿ ಹತ್ಯೆಗೈದಿದ್ದರು. ಆನಂತರದಿಂದ ರಾಜ್ಯದ ಮೂಲೆ ಮೂಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ.. ಬಿಜೆಪಿ ಕಾರ್ಯಕರ್ತರು ಹಿಂದೂ ಕಾರ್ಯಕರ್ತರು ಸರ್ಕಾರದ ವಿರುದ್ಧವೇ ತಿರುಗಿಬಿದ್ದಿದ್ದಾರೆ,.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ 31 ವರ್ಷದ ಪ್ರವೀಣ್ ಕುಮಾರ್ ನೆಟ್ಟಾರು , ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು.. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು.
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಸಾವಿನಿಂದಾಗಿ ಹಿಂದೂ ಪರ ಹೋರಾಟಗಾರರು ಜೊತೆಗೆ ಬಿಜೆಪಿ ಕಾರ್ಯಕರ್ತರೂ ಸರ್ಕಾರದ ವಿರುದ್ಧ ಆಕ್ರೋಸ ಹೊರಹಾಕುತ್ತಾ ಪ್ರತಿಭಟನೆಗಳನ್ನ ಮಾಡ್ತಿದ್ದು , ದಕ್ಷಿಣ ಕನ್ನಡದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ..








