ಕರ್ನಾಟಕ ಬಂದ್ ಮುಂದೂಡುವಂತೆ ಪತ್ರ ಬರೆದ ಕರವೇ ಪ್ರವೀಣ್ ಶೆಟ್ಟಿ…
ವಿವಿಧ ಕನ್ನಡ ಪರ ಸಂಘಟನೆಗಳು ಡಿ.31ರಂದು ಕರೆ ನೀಡಿದ್ದ ಕರ್ನಾಟಕ ಬಂದ್ ಅನ್ನು ಮುಂದೂಡಬೇಕು ಎಂದು ಕರವೇ ಅಧ್ಯಕ್ಷ ಪ್ರವಿಣ್ ಶೆಟ್ಟಿ ಅವರು ಕನ್ನಡಪರ ಸಂಘಟನೆಗಳ ಒಕ್ಕೂಟಕ್ಕೆ ಮನವಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕಾರ್ಯಕರ್ತರು ನಡೆಸಿರುವ ಪುಂಡಾಟಿಕೆ ವಿರೋಧಿಸಿರುವ ವಿವಿಧ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಮಾಡಲು ನಿರ್ಧರಿಸಿದ್ದವು. ಆದರೆ ಕರ್ನಾಟಕ ಬಂದ್‌ಗೆ ಕೆಲವು ಕನ್ನಡಪರ ಸಂಘಟನೆಗಳು, ಚಲನಚಿತ್ರೋದ್ಯಮದ ಹಲವರು ಬೆಂಬಲ ನೀಡಿರಲಿಲ್ಲ. ಕರ್ನಾಟಕ ಅದಲ್ಲದೆ ಡಿಸೆಂಬರ್ 31 ಹೊಸ ವರ್ಷದ ಹೊದಿನ ದಿನವಾಗಿರುವುದರಿಂದ ಸಂಭ್ರಮಾಚಣೆಗಳು, ವ್ಯಾಪಾರ ವಹಿವಾಟು ಜೋರಾಗಿರುತ್ತದೆ. ಇದರಿಂದ ಹಲವರಿಗೆ ತೊಂದರೆಯಾಗುತ್ತದೆ ಎನ್ನುವ ಮಾತುಗಳು ಕೇಳಿಬಂದಿದ್ದವು.
ಅಲ್ಲದೇ ಕೊರೊನಾ ಲಾಕ್‌ಡೌನ್‌ನಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ಬಂದ್‌ನಿಂದ ನಷ್ಟವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಕರ್ನಾಟಕ ಬಂದ್‌ಗೆ ಎರಡೇ ದಿನ ಬಾಕಿ ಉಳಿದಿರುವಾಗಲೇ ಹಲವು ವಲಯಗಳಿಂದ ಇನ್ನೂ ಪರಿಪೂರ್ಣ ಬೆಂಬಲ ಸಿಕ್ಕಿರಲಿಲ್ಲ.
ಆದ್ದರಿಂದ ಸದ್ಯಕ್ಕೆ ಮುಂದೂಡಲು ಪ್ರವೀಣ್ ಶೆಟ್ಟಿ ಮನವಿ ಮಾಡಿ ಪತ್ರ ಬರೆದಿದ್ದಾರೆ.








