ಗರ್ಭಿಣಿ ಎಂದು ಗೊತ್ತಾದ ತಕ್ಷಣ ಪ್ರಿಯತಮೆಯನ್ನು ಸಮಾಧಿ ಮಾಡಿದ ಬಾಯ್ ಫ್ರೆಂಡ್..!
ಜಾರ್ಖಂಡ್ : ಪ್ರೀತಿಸುತ್ತಿದ್ದ ಅಪ್ರಾಪ್ತ ಹುಡುಗಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದ ತಕ್ಷಣ ಆಕೆಯ ಬಾಯ್ ಫ್ರೆಂಡ್ ಆಕೆಯನ್ನ ಕೊಂದು ಸಮಾಧಿ ಮಾಡಿರುವ ಘಟನೆ ಜಾರ್ಖಂಡ್ ನ ಪಲಮು ಜಿಲ್ಲೆಯಲ್ಲಿ ನಡೆದಿದೆ. ಹೌದು ಪ್ರಿಯಕರ ಹಾಗೂ ಆತನ ಸ್ನೇಹಿತ ಸೇರಿ 17 ವರ್ಷದ ಗರ್ಭಿಣಿ ಹುಡುಗಿಯನ್ನು ಕೊಂದು ಶವವನ್ನು ಸಮಾಧಿ ಮಾಡಿದ್ದಾರೆ. ಆರೋಪಿ ಹಾಗೂ ಮೃತ ಹುಡುಗಿ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ದೈಹಿಕವಾಗಿ ಸಂಪರ್ಕವನ್ನೂ ಬೆಳೆಸಿದ್ದರು. ಪರಿಣಾಮ ಹುಡುಗಿ ಗರ್ಭವತಿಯಾಗಿದ್ದಳು. ಬಳಿಕ ತನ್ನನ್ನ ಮದುವೆಯಾಗುವಂತೆ ಹುಡುಗಿ ಆರೋಪಿ ಮೇಲೆ ಒತ್ತಡ ಹೇರಿದ್ದಳು. ಆದ್ರೆ ಆತ ಆಕೆಗೆ ಗರ್ಭಪಾತ ಮಾಡಿಸಲು ಮುಂದಾಗಿದ್ದ. ಈ ವೇಳೆ ಗರ್ಭಪಾತ ಮಾಡಿಸಲು ಆರೋಪಿಯ ಬಳಿ ನರ್ಸ್ 10 ಸಾವಿರ ರೂಪಾಯಿಗಳಿಗೆ ಬೇಡಿಕೆಯಿಟ್ಟಿದ್ದಳು.
ವಿವಾಹಿತ ಮಹಿಳೆಯನ್ನ ಬಲವಂತವಾಗಿ ಎಳೆದೊಯ್ದು ಟಾರ್ಚರ್ ಕೊಟ್ಟ ಪಾಗಲ್ ಪ್ರೇಮಿ..!
ಆದ್ರೆ ದುಡ್ಡು ಹೊಂದಿಸಲಾಗದೇ ಮದುವೆಯಾಗಲು ತಯಾರಿಲ್ಲದೇ ಇದ್ದ ಆರೋಪಿ ತನ್ನ ಸ್ನೇಹಿತನ ಜೊತೆ ಸೇರಿ ಹುಡುಗಿನ ಕಥೆ ಮುಗಿಸಿದಾನೆ. ಹುಡುಗಿನ್ನ ನಿರ್ಜನ ಪ್ರದೇಶಕ್ಕೆ ಕರೆದು ಚಾಕು ಇರಿದು ಕೊಲೆ ಮಾಡದ್ದಾನೆ. ಬಳಿಕ ಮೃತದೇಹವನ್ನ ಸಮಾಧಿ ಮಾಡಿದ್ದಾರೆ. ಇತ್ತ ಹುಡುಗಿ ನಾಪತ್ತೆಯಾಗಿದ್ದ ಬಗ್ಗೆ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ತನಿಖೆ ಆರಂಭಿಸಿದ್ದ ಪೊಲೀಸರು ಹುಡುಗಿಯ ಮೃತದೇಹ ಪತ್ತೆ ಮಾಡಿ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.