ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದ ನೆನಪಿರಲಿ ಪ್ರೇಮ್ ಇದೀಗ ಬಹುನಿರೀಕ್ಷಿತ ಪ್ರೇಮಂ ಪೂಜ್ಯಂ ಸಿನಿಮಾ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರೇಮ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ವಿಭಿನ್ನ ಕ್ಯಾರೆಕ್ಟರ್ ನಿಭಾಯಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಈ ನಡುವೆ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಆದ್ರೆ ಮತ್ತೊಮ್ಮೆ ಚಿತ್ರತಂಡವು ರಿಲೀಸ್ ಡೇಟ್ ಮುಂದೂಡಿದ್ದು, ಇದೀಗ ಹೊಸ ದಿನಾಂಕವನ್ನ ಘೋಷಣೆ ಮಾಡಿದೆ. ನವೆಂಬರ್ 12 ರಂದು ಸಿನಿಮಾ ರಿಲೀಸ್ ಆಗಲಿದೆ.
ಹೌದು ಕಳೆದ ದಿನ ಸೆನ್ಸಾರ್ ಪರೀಕ್ಷೆಯನ್ನ ಯಶಸ್ವಿಯಾಗಿ ಪೂರೈಸಿ UA ಸರ್ಟಿಫಿಕೇಟ್ ಪಡೆದಿರುವ ‘ಪ್ರೇಮಂ ಪೂಜ್ಯಂ’ ಮೂರು ತಿಂಗಳಿನಿಂದ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತ ಪ್ರಚಾರದ ಪಡಸಾಲೆಯಲ್ಲಿ ಸೌಂಡ್ ಮಾಡುತ್ತಾ ಬಂದಿದೆ.
ಈಗ ರಿಲೀಸ್ ವಿಚಾರದಲ್ಲಿ ದೊಡ್ಡ ನಿರ್ಧಾರಕ್ಕೆ ಬಂದಿರುವ ಪ್ರೇಮಂ ಪೂಜ್ಯಂ ಸಿನಿ ತಂಡ, ಮತ್ತೊಮ್ಮೆ ಬಿಡುಗಡೆ ದಿನಾಂಕ ಮುಂದೂಡಿ ನವೆಂಬರ್ 12 ರಂದು ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದೆ.
ಇದಕ್ಕೆ ಒಂದು ಬಲವಾದ ಕಾರಣವೂ ಇದೆ. ಅಕ್ಟೋಬರ್ 29ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಆದ್ರೆ ಎಲ್ರಿಗೂ ಗೊತ್ತೇ ಇರೋ ಹಾಗೇ ಅದೇ ದಿನವೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಹುನಿರೀಕ್ಷೆಯ ಭಜರಂಗಿ 2 ಸಿನಿಮಾ ತೆರೆಗಪ್ಪಳಿಸಲಿದೆ. ಹೀಗಾಗಿ ಸಿನಿಮಾ ರಿಲೀಸ್ ಡೇಟ್ ಮುಂದೂಡಿದೆ.