ಚಿಕ್ಕಬಳ್ಳಾಪುರ: ಸಿಕ್ಕ ಸಿಕ್ಕ ಆಸ್ತಿಗಳನ್ನು ವಕ್ಫ್ ಗೆ ಪರಭಾರೆ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಮಂಗಳವಾರ (ನ.19) ಚಿಕ್ಕಬಳ್ಳಾಪುರದಲ್ಲಿ (Chikkaballapura) ಬೃಹತ್ ಹೋರಾಟ ನಡೆಯುತ್ತಿದ್ದು, ವಿಪಕ್ಷ ನಾಯಕ ಆರ್. ಅಶೋಕ್ ಭಾಗವಹಿಸುತ್ತಿದ್ದಾರೆ.
ಆರ್. ಅಶೋಕ್ ಅವರು, ವಿಶ್ವೇಶ್ವರಯ್ಯ ಓದಿರುವ ಕಂದವಾರ ಸರ್ಕಾರಿ ಪ್ರಾಥಮಿಕ ಶಾಲೆಗೆ ಮೊದಲು ಭೇಟಿ ನೀಡಲಿದ್ದಾರೆ. ಏಕೆದಂರೆ, ಈ ಶಾಲೆ ಕೂಡ ವಕ್ಫ್ ಎಂದು ನಮೂದಿಸಲಾಗಿತ್ತು. ಪ್ರಕರಣದ ವರದಿಯ ನಂತರ ಜಿಲ್ಲಾಡಳಿತ ವಕ್ಪ್ ಆಸ್ತಿಯಿಂದ (Waqf Property) ಸರ್ಕಾರಿ ಶಾಲೆ ಆಸ್ತಿ ಎಂದು ಬದಲವಾಣೆ ಮಾಡಿದೆ. ಆನಂತರ ಅವರು, ಚಿಕ್ಕಬಳ್ಳಾಪುರ ನಗರದಲ್ಲಿ ಸಂಸದ ಸುಧಾಕರ್ ನೇತೃತ್ವದಲ್ಲಿ ನಡೆಯಲಿರುವ ʻವಕ್ಫ್ ಜಿಹಾದ್ʼ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಿಮ್ಮಸಂದ್ರದ ವಕ್ಫ್ ಆಸ್ತಿ ವಿವಾದಿತ ಜಮೀನಿಗೆ ಮಾಜಿ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಭೇಟಿ ನೀಡಲು ಮುಂದಾಗಿದ್ದರು. ವಿವಾದಿತ ಜಾಗಕ್ಕೆ ಬಿಜೆಪಿ ಮುಖಂಡರು ಬರಬಾರದು ಅಂತ ಪೊಲೀಸರು ಭಾರೀ ಭದ್ರತೆ ಕೈಗೊಂಡಿದ್ದರು.
ಇದಕ್ಕೂ ಮುನ್ನ ಚಿಂತಾಮಣಿ ನಗರದ ಕನ್ನಂಪಲ್ಲಿ ಆಂಜನೇಯ ಸ್ವಾಮಿ ದೇವಾಲಯದ ಹತ್ತಿರ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಸಂಸದ ಮುನಿಸ್ವಾಮಿ ವಿವಾದಿತ ಜಾಗಕ್ಕೆ ತೆರಳದಂತೆ ಪೊಲೀಸರು ಅಡ್ಡಿಪಡಿಸಿದರು. ಕೊನೆಗೆ ಭದ್ರತೆಯಲ್ಲಿ ನಾಯಕರನ್ನು ಕರೆದುಕೊಂಡು ಹೋಗಲಾಯಿತು. ಈ ವೇಳೆ 60 ವರ್ಷಗಳಿಂದ ಉಳುಮೆ ಮಾಡಿಕೊಂಡು ಅನುಭೋಗದಲ್ಲಿದ್ದಾರೆ. ಆದರೂ ಹೇಗೆ ವಕ್ಫ್ ಆಸ್ತಿಯಾಯಿತು ಎಂದು ಅಧಿಕಾರಿಗಳನ್ನು ಮುನಿಸ್ವಾಮಿ ತರಾಟೆಗೆ ತೆಗೆದುಕೊಂಡರು.