ನಟ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಸಾಧನ ಮಾಡಿತ್ತು. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಇತಿಹಾಸ ನಿರ್ಮಾಣ ಮಾಡಿತ್ತು. ಸದ್ಯ ಚಿತ್ರ ತಂಡದಿಂದ ಮತ್ತೊಂದು ಅಪ್ಡೇಟ್ ಸಿಕ್ಕಿದೆ.
ಸದ್ಯ ಚಿತ್ರದ ಸೀಕ್ವೆಲ್ ಗಾಗಿ ಸಿದ್ಧತೆ ನಡೆಯುತ್ತಿದೆ. ಈ ಚಿತ್ರಕ್ಕೆ ಸಕ್ಸಸ್ ತಂದು ಕೊಟ್ಟ ಡೈರೆಕ್ಟರ್ ಸಿದ್ಧಾರ್ಥ್ ಆನಂದ್ಗೆ ನಿರ್ಮಾಪಕ ಗೇಟ್ ಪಾಸ್ ನೀಡಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟಿಸಿದ್ದರು. ಸದ್ಯ ಪಠಾಣ್ ಪಾರ್ಟ್ 2ಗೆ ಸಿದ್ಧತೆ ನಡೆಯುತ್ತಿದೆ. ಈ ವರ್ಷದ ಅಂತ್ಯದಲ್ಲಿ ಶೂಟಿಂಗ್ ಕೂಡ ಆರಂಭವಾಗಲಿದೆ ಎನ್ನಲಾಗುತ್ತಿದೆ. ಆದರೆ, ಸಿದ್ಧಾರ್ಥ್ ಆನಂದ್ ಬದಲು ಬೇರೆ ನಿರ್ದೇಶಕನಿಗೆ ಮಣೆ ಹಾಕಲು ನಿರ್ಮಾಪಕರು ಮುಂದಾಗಿದ್ದಾರೆ ಎಂಬ ಅಪ್ಡೇಟ್ ಸಿಕ್ಕಿದೆ.
ಇತ್ತೀಚೆಗೆ ಕೂಡ ‘ಟೈಗರ್’ ಮತ್ತು ‘ವಾರ್’ ಸಿನಿಮಾದ ಸೀಕ್ವೆಲ್ ನಲ್ಲಿ ಕೂಡ ಆದಿತ್ಯಾ ನಿರ್ದೇಶಕರನ್ನು ಬದಲಾಯಿಸಿದ್ದರು. ಇಲ್ಲಿ ಕೂಡ ಅದೇ ನಿಯಮ ಬಳಕೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಪಠಾಣ್ ಸಕ್ಸಸ್ ನಂತರ ‘ಫೈಟರ್’ ಸಿನಿಮಾಗೆ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದರು. ಆದರೆ, ಅದು ಯಶಸ್ಸು ಕಂಡಿರಲಿಲ್ಲ. ಹೀಗಾಗಿ ಆದಿತ್ಯಾ ನಿರ್ದೇಶಕರನ್ನು ಬದಲಾಯಿಸೋದು ಸೂಕ್ತ ಎಂದು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಪಠಾಣ್ 2 ಚಿತ್ರಕ್ಕೆ ಬೇರೆ ನಿರ್ದೇಶಕರು ಕ್ಯಾಪ್ ತೊಡಲಿದ್ದಾರೆ.