ಕಡಲನಗರಿ ಮಂಗಳೂರು ಕೊರೋನಾ ಸೋಂಕಿನಿಂದ ಬೆಚ್ಚಿ ಬಿದ್ದಿದೆ. ಇಲ್ಲಿನ ಉಳ್ಳಾಲ ಸೋಮೇಶ್ವರದ 38 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೋಮೇಶ್ವರ ಪ್ರದೇಶವನ್ನು ಸೀಲ್ ಡೌನ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.
ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಕುಲಶೇಖರದ 80 ವರ್ಷದ ಕೊರೋನಾ ಸೋಂಕಿತ ವೃದ್ಧೆಯಿಂದ ಸೋಮೇಶ್ವರದ ಮಹಿಳೆಗೆ ಹರಡಿದೆ. ಇವರಿಬ್ಬರೂ ಸದ್ಯ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿದ್ದಾರೆ.
ಕಡಲ ತೀರವಾದ ಸೋಮೇಶ್ವರದಲ್ಲಿ ಇದುವರೆಗೆ ಯಾವುದೇ ಕೊರೋನಾ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಈಗ ಪ್ರಕರಣ ಪತ್ತೆಯಾಗಿರುವುದರಿಂದ ಇಲ್ಲಿನ ಜನತೆಗೆ ಹೊಸ ತಲೆನೋವು ಆರಂಭವಾಗಿದೆ. ಸೀಲ್ ಡೌನ್ ಬಲೆಯಲ್ಲಿ 14 ದಿನ ಕಳೆಯಬೇಕಾದ ಅನಿವಾರ್ಯತೆ ಇಲ್ಲಿನವರಿಗೆ. ಈಗಾಗಲೇ ನಗರದ ಬೋಳೂರು ಪ್ರದೇಶ, ಶಕ್ತಿನಗರ, ಬಂಟ್ವಾಳ ತಾಲೂಕಿನ ಕಸಬಾ ಸೀಲ್ ಡೌನ್ ವ್ಯಾಪ್ತಿಯಲ್ಲಿವೆ.