President Poll – ವೀಲ್ ಚೇರ್ ನಲ್ಲಿ ಬಂದು ಮತ ಚಲಾಯಿಸಿದ ಮನಮೋಹನ್ ಸಿಂಗ್
ರಾಷ್ಟ್ರಪತಿ ಆಯ್ಕೆಗಾಗಿ ನಡೆಯುತ್ತಿರುವ ಚುನಾವಣೆಗೆ ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ಸಂಸದ ಮನಮೋಹನ್ ಸಿಂಗ್ ಅವರು ವೀಲ್ ಚೇರನಲ್ಲಿ ಬಂದು ಸಂಸತ್ತಿನಲ್ಲಿ ಓಟ್ ಮಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ರಾಷ್ಟ್ರಪತಿ ಚುನಾವಣೆಯ ಮೊದಲ 1.5 ಗಂಟೆಗಳಲ್ಲಿ 350 ಮತದಾರರು ಮತ ಚಲಾಯಿಸಿದ್ದಾರೆ. ಮನ್ ಮೋಹನ್ ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮತ ಚಲಾಯಿಸಿದ್ದಾರೆ ಎಂದು ವರದಿಯಾಗಿದೆ. ಮನಮೋಹನ್ ಸಿಂಗ್ ಮತಪೆಟ್ಟಿಗೆ ಹತ್ತಿರ ತಲುಪುತ್ತಿದ್ದಂತೆ ನಾಲ್ಕು ಅಧಿಕಾರಿಗಳು ಗಾಲಿಕುರ್ಚಿಯಿಂದ ಎದ್ದು ಮತ ಚಲಾಯಿಸಲು ಸಹಾಯ ಮಾಡಿದರು. ಅನಾರೋಗ್ಯದ ಕಾರಣದಿಂದಾಗಿ ಮನಮೋಹನ್ ಸಿಂಗ್ ಕಳೆದ ವರ್ಷ ಸಂಸತ್ತಿನ ಸಂಪೂರ್ಣ ಚಳಿಗಾಲದ ಅಧಿವೇಶನಕ್ಕೆ ರಜೆ ತೆಗೆದುಕೊಂಡಿದ್ದರು.
https://twitter.com/i/status/1548913788816015360
ರಾಷ್ಟ್ರಪತಿ ಚುನಾವಣೆಗೆ ವಿವಿಧ ರಾಜ್ಯಗಳ ವಿಧಾನಸಭೆಯಲ್ಲಿ ಮತದಾನ ನಡೆಯುತ್ತಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತದಾನ ಮಾಡಿದ್ದಾರೆ.
ಸುಮಾರು 4,800 ಚುನಾಯಿತ ಸಂಸದರು ಮತ್ತು ಶಾಸಕರು ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಸಂಸತ್ ಭವನದ ಮೊದಲ ಮಹಡಿಯಲ್ಲಿ ಕೊಠಡಿ ಸಂಖ್ಯೆ 63 ನ್ನು ಮತಗಟ್ಟೆಯಾಗಿ ಪರಿವರ್ತಿಸಲಾಗಿದೆ.








