ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ. ಇದರ ಮಧ್ಯೆ ಬೆಲೆ ಏರಿಕೆ ಜನರನ್ನು ಕಂಗೆಡಿಸಿದೆ.
ಲಕ್ಷ್ಮಿಯನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ರಾಜ್ಯದ ಜನ ಸಜ್ಜಾಗಿದ್ದಾರೆ. ಹೂವು, ಹಣ್ಣು, ಪೂಜಾಸಾಮಗ್ರಿ ಹಾಗೂ ತರಕಾರಿ ದರಗಳು ದುಬಾರಿಯಾಗಿವೆ.ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲು ನಾಡಿನ ಜನತೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಬೆಂಗಳೂರಿನ ಪ್ರಮುಖ ಮಾರುಕಟ್ಟೆಯಾಗಿರುವ ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರಂ, ಯಶವಂತಪುರ, ಶಿವಾಜಿನಗರ ಮಾರುಕಟ್ಟೆಗಳಲ್ಲಿ ಜನರು ಕಿಕ್ಕಿರಿದು ತುಂಬಿದ್ದಾರೆ.
ಪ್ರತಿ ಕೆಜಿ ಮಲ್ಲಿಗೆ ಹೂವು 1 ಸಾವಿರ, ಕನಕಾಂಬರಿ ಪ್ರತಿ ಕೆಜಿಗೆ 2 ಸಾವಿರ ರೂ.ಗೆ ಮಾರಟವಾಗುತ್ತಿದೆ. ಸೇವಂತಿಗೆ, ಗುಲಾಬಿ, ಸುಗಂಧರಾಜ ಹೂವು ದುಬಾರಿಯಾಗಿವೆ. ತರಕಾರಿಗಳ ಬೆಲೆಯೂ ಗಗನ ಕುಸುಮವಾಗಿದ್ದು, ಗ್ರಾಹಕರು ಹೆಚ್ಚಿನ ಬೆಲೆ ತೆರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.