ಪೆಟ್ರೋಲ್, ಡಿಸೇಲ್ ದರ ಏರಿಕೆ ಬೆನ್ನಲ್ಲೆ `ಎಲ್ ಪಿಜಿ ಬೆಲೆ ಹೆಚ್ಚಳ’
ನವದೆಹಲಿ : ದೇಶದಲ್ಲಿ ಕೆಲ ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಕಾಣುತ್ತಲೇ ಇದೆ. ಇದರ ಬೆನ್ನಲ್ಲೆ ಇದೀಗ ಎಲ್ಪಿಜಿ ಬೆಲೆ ಹೆಚ್ಚಳವಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.
ದೇಶಿ ಬಳಕೆಯ 14.2 ಕೆ.ಜಿ ಎಲ್ಪಿಜಿ ಸಿಲಿಂಡರ್ನ ಬೆಲೆ 50 ರೂ. ಏರಿಕೆಯಾಗಿದ್ದರೇ 5 ಕೆ.ಜಿ. ಚಿಕ್ಕ ಸಿಲಿಂಡರ್ನ ಬೆಲೆ18 ರೂ. ಹೆಚ್ಚಳವಾಗಿದ್ದು 19 ಕೆ.ಜಿ. ಸಿಲಿಂಡರ್ನ ಬೆಲೆ 36.50 ರೂ.ಯಷ್ಟು ಏರಿಕೆ ಕಂಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಗ್ಯಾಸ್ ಸಿಲಿಂಡರ್ ಮೊದಲು 594 ರೂ. ಇತ್ತು, ಈಗ 644 ರೂ.ಆಗಿದೆ.
ಇದನ್ನೂ ಓದಿ : ಸಹೋದ್ಯೋಗಿಗಳ ಸ್ನಾನದ ಧೃಶ್ಯ ಸೆರೆ.. ಪ್ರಿಯಕರನಿಗೆ ರವಾನೆ… ಕಾರಣವೇ ವಿಚಿತ್ರ…!
ಕೋಲ್ಕತ್ತಾದಲ್ಲಿ 620.50 ರೂ. ಇದ್ದ ಸಿಲಿಂಡರ್ ಬೆಲೆ 670.50 ರೂ ಆಗಿದ್ದರೇ ಮುಂಬೈನಲ್ಲಿ 644 ಮತ್ತು ಚೆನ್ನೈನಲ್ಲಿ 660 ರೂ. ಹೆಚ್ಚಳವಾಗಿದೆ.
ಇನ್ನು ವಾಣಿಜ್ಯ ಸಿಲಿಂಡರ್ನ ಬೆಲೆ 54.50 ರೂ. ಏರಿಸಲಾಗಿದೆ. ಈಗ ದೆಹಲಿಯಲ್ಲಿ ಇದರ ಬೆಲೆ 1,296 ರೂ.ಯಷ್ಟಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel