ನವದೆಹಲಿ: ಕೊರೊನಾ ಸೋಂಕು ತಡೆಗೆ ಘೋಷಿಸಿದ್ದ 21 ದಿನಗಳ ಲಾಕ್ಡೌನ್ ಕೊನೇ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು, ಮತ್ತೆ 19 ದಿನಗಳಿಗೆ ಲಾಕ್ ಡೌನ್ ವಿಸ್ತರಿಸಿದ್ದಾರೆ. ಅಲ್ಲದೆ ಕೊರೊನಾ ತಡೆಯುವ ನಿಟ್ಟಿನಲ್ಲಿ ಸಪ್ತಪದಿ ಅನುಸರಿಸಲು ಕರೆ ಕೊಟ್ಟಿದ್ದಾರೆ. ಅಲ್ಲದೆ ವಿಸ್ತೃತ ಮಾರ್ಗಸೂಚಿಯನ್ನು ನಾಳೆ ಪ್ರಕಟಿಸುವುದಾಗಿಯೂ ಹೇಳಿದ್ದಾರೆ. ಪ್ರಧಾನಿ ಮೋದಿ ಸಪ್ತಪದಿ ಸೂತ್ರಗಳೇನು?
1. ಕಟ್ಟುನಿಟ್ಟಾಗಿ ಲಾಕ್ಡೌನ್ ನಿಯಮ ಪಾಲಿಸಬೇಕು. ಯಾರಿಗೆ ನೆರವು ಬೇಕೋ ಅವರಿಗೆ ನೆರವು ನೀಡಿ.
2 ಮನೆಯಲ್ಲಿ ಇರುವ ಹಿರಿಯರನ್ನು ಹೆಚ್ಚುವರಿ ಕಾಳಜಿಯಿಂದ ನೋಡಿಕೊಳ್ಳಿ.
3 ಸೋಷಿಯಲ್ ಡಿಸ್ಟೆನ್ಸಿಂಗ್ ಪಾಲಿಸಿ, ಮನೆಯಲ್ಲೇ ತಯಾರಿಸಿದ ಮುಖದ ಮಾಸ್ಕ್ ಧರಿಸಿ
4 ಆಯುಷ್ ಸಚಿವಾಲಯದ ನಿರ್ದೇಶನಗಳನ್ನು ನಿಮ್ಮ ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುವ ಸಲುವಾಗಿ ಪಾಲಿಸಬೇಕು.
5 ಆರೋಗ್ಯ ಸೇತು ಆಯಪ್ ಡೌನ್ಲೋಡ್ ಮಾಡಿಕೊಳ್ಳಿ.
6 ನಿಮ್ಮಲ್ಲಿ ಕೆಲಸ ಮಾಡುವವರನ್ನು ವಜಾಗೊಳಿಸಬೇಡಿ. ಅವರ ಅಗತ್ಯಗಳಿಗೆ ಸೂಕ್ಷ್ಮವಾಗಿ ಸ್ಪಂದಿಸಿ.
7 ಡಾಕ್ಟರ್ಸ್ ಮತ್ತು ನರ್ಸ್ಗಳಿಗೆ ಹಾಗೂ ಯಾರೆಲ್ಲ ಕರೊನಾ ಸೋಂಕು ಹರಡದಂತೆ ತಡೆಯಲು ಹೋರಾಡುತ್ತಿದ್ದಾರೋ ಅವರಿಗೆಲ್ಲ ಗೌರವಿಸಿ.
ಈ ಏಳು ಸೂತ್ರಗಳನ್ನು ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿಕೊಂಡಿದ್ದಾರೆ.








