ಆತ್ಮ ನಿರ್ಭರದ ಹರಿಕಾರ ಪ್ರಧಾನಿ ಮೋದಿ ಅವರಿಗೆ 70ನೇ ಹುಟ್ಟುಹಬ್ಬದ ಸಂಭ್ರಮ
ಹೊಸದಿಲ್ಲಿ, ಸೆಪ್ಟೆಂಬರ್17: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು 70 ವರ್ಷ ತುಂಬುತ್ತಿದ್ದಂತೆ, ಭಾರತೀಯ ಜನತಾ ಪಾರ್ಟಿ ಇಡೀ ವಾರ ಆಚರಣೆಯನ್ನು ಯೋಜಿಸಿದೆ. ಈ ಸಾಪ್ತಾಹಿಕ ಆಚರಣೆಯ ಅಂಗವಾಗಿ ಪಕ್ಷವು ದೇಶಾದ್ಯಂತ ಪ್ರತಿ ಜಿಲ್ಲೆಯ 70 ಸ್ಥಳಗಳಲ್ಲಿ ಮರ ನೆಡುವಿಕೆ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಿದೆ.
ಕಳೆದ ಒಂದು ವಾರದಿಂದ, ಬಿಜೆಪಿ ಕಾರ್ಯಕರ್ತರು ಅಗತ್ಯವಿರುವವರಿಗೆ ಪಡಿತರ ವಿತರಣೆ, ರಕ್ತದಾನ ಶಿಬಿರಗಳನ್ನು ಆಯೋಜಿಸುವುದು ಮತ್ತು ಕಣ್ಣಿನ ತಪಾಸಣಾ ಶಿಬಿರಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ದೇಶಾದ್ಯಂತ ಹಲವಾರು ಸಾಮಾಜಿಕ ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ನವದೆಹಲಿಯ ಆದರ್ಶನಗರದ ಮಜ್ಲಿಸ್ ಪಾರ್ಕ್ ಕ್ಯಾಂಪ್ನಲ್ಲಿ ಪಾಕಿಸ್ತಾನದ ಹಿಂದೂ ನಿರಾಶ್ರಿತರಿಗೆ ಹೊಲಿಗೆ ಯಂತ್ರಗಳು, ಆಹಾರ ಪದಾರ್ಥಗಳ ವಿತರಣೆ ಸೇರಿದಂತೆ ಇತರ ಯೋಜನೆಗಳನ್ನು ಕೈಗೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ಅಭಿಮಾನಿಗಳು, ತನ್ನ ಜೀವನವನ್ನು ದೇಶವಾಸಿಗಳಿಗೆ ಮೀಸಲಿಟ್ಟಿರುವ ಮತ್ತು ರಾಷ್ಟ್ರದ ಪ್ರಗತಿಗೆ ಶ್ರಮಿಸುತ್ತಿರುವ ನಮ್ಮ ಪ್ರಧಾನಿ, ವಿಶ್ವ ರಾಷ್ಟ್ರಗಳ ಮುಂದೆ ಪ್ರಬಲ ರಾಷ್ಟ್ರದ ಮುಖ್ಯಸ್ಥರಾಗಿದ್ದಾರೆ. ಬಾಲ್ಯದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದ, ತಾಯಿ ಮತ್ತು ತಂದೆಯ ಬಗ್ಗೆ ಕಾಳಜಿ ವಹಿಸಿದ್ದ ನರೇಂದ್ರ ಮೋದಿ ಅವರಿಗೆ ಅನೇಕ ಜೀವನ ಅನುಭವಗಳಿವೆ. ಆದ್ದರಿಂದ ಸಾರ್ವಜನಿಕ ಕಾರ್ಯಗಳಲ್ಲಿ, ಕಠಿಣ, ನಿಸ್ವಾರ್ಥ ಮತ್ತು ಪ್ರಾಮಾಣಿಕ ಕೆಲಸವನ್ನು ನಿರ್ವಹಿಸಲು ಅವರಿಗೆ ಸಾಧ್ಯವಾಗಿದೆ. ಅವರು ತಮ್ಮ ಸೇವಾ ಜೀವನದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರದ ಆರೋಪದ ಕಳಂಕವನ್ನು ಹೊತ್ತಿಲ್ಲ.
ಭಾರತ ಇಂದು ಸಾಧಿಸಿರುವ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಕಾಶಮಾನವಾದ ಮತ್ತು ಧೈರ್ಯಶಾಲಿ ನಾಯಕರಾಗಿದ್ದು ಭಾರತದ ಘನತೆ ಮತ್ತು ಹೆಮ್ಮೆಯನ್ನು ಎತ್ತಿಹಿಡಿದಿದ್ದಾರೆ.
ಇಂದು ಅವರ 70 ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಭಾರತ ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ಮತ್ತು ಬೆದರಿಕೆಗಳನ್ನು ಎದುರಿಸಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದರು.
ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರು ಶಿವನಿಗೆ 70 ಕಿಲೋಗ್ರಾಂಗಳಷ್ಟು ಲಾಡುವನ್ನು ಶಿವನ್ ಕಾಮಾಚಿ ಅಮ್ಮನ್ ದೇವಸ್ಥಾನದಲ್ಲಿ ಅರ್ಪಿಸಿ ಅದನ್ನು ಜನರಿಗೆ ಹಂಚಿದ್ದಾರೆ.