‘ಗಂಧಗಿ ಮುಕ್ತ ಭಾರತ್’ ನ ಒಂದು ವಾರದ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ
ಹೊಸದಿಲ್ಲಿ, ಅಗಸ್ಟ್ 9: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಆಗಸ್ಟ್ 8, 2020) “ಗಂಧಗಿ ಮುಕ್ತ ಭಾರತ್” (ಕಸ ಮುಕ್ತ ಭಾರತ) ನ ಒಂದು ವಾರದ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು.
ಮಹಾತ್ಮ ಗಾಂಧಿಯವರಿಗೆ ಗೌರವ ಸೂಚಕವಾಗಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು ಉದ್ಘಾಟಿಸಿದರು. ಪ್ರಧಾನಿ ಮೋದಿ ರಾಷ್ಟ್ರೀಯ ಸ್ವಚ್ಛ ಕೇಂದ್ರವನ್ನು ಗಾಂಧಿಯವರ ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸವದ ಸಂದರ್ಭದಲ್ಲಿ ಅಂದರೆ 2017 ರ ಏಪ್ರಿಲ್ನಲ್ಲಿ ಮೊದಲು ಘೋಷಿಸಿದ್ದರು.

ಈ ವಾರದಲ್ಲಿ, ಆಗಸ್ಟ್ 15 ರವರೆಗೆ ಪ್ರತಿ ದಿನ ನಗರ ಮತ್ತು ಗ್ರಾಮೀಣ ಭಾರತದಲ್ಲಿ ಸ್ವಚ್ಚತೆಗಾಗಿ ಜನ್ ಆಂದೋಲನ್ ಅನ್ನು ಪುನಃ ಜಾರಿಗೊಳಿಸಲು ವಿಶೇಷ ಸ್ವಚ್ಛ ಉಪಕ್ರಮಗಳನ್ನು ಈ ಅಭಿಯಾನ ಹೊಂದಿರುತ್ತದೆ.
ನವದೆಹಲಿಯ ರಾಜ್ಘಾಟ್ನಲ್ಲಿರುವ ಗಾಂಧಿ ಸ್ಮೃತಿ ಮತ್ತು ದರ್ಶನ ಸಮಿತಿಯಲ್ಲಿ ಸ್ವಚ್ಛಭಾರತ್ ಮಿಷನ್ನ ಸಂವಾದ ಅನುಭವ ಕೇಂದ್ರವಾದ ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು (ಆರ್ಎಸ್ಕೆ) ಉದ್ಘಾಟಿಸುವಾಗ ಪ್ರಧಾನಿ ಮೋದಿ ಈ ಅಭಿಯಾನವನ್ನು ಪ್ರಾರಂಭಿಸಿದರು. ನಂತರ ದೆಹಲಿಯ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು.








