ಇಂದು ಅಟಲ್ ಸುರಂಗವನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ರೋಹ್ಟಾಂಗ್, ಅಕ್ಟೋಬರ್03: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತಿ ಉದ್ದದ ಸುರಂಗವನ್ನು ಉದ್ಘಾಟಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಉದ್ಘಾಟನಾ ಸಮಾರಂಭದ ಸಿದ್ಧತೆಗಳನ್ನು ಪರಿಶೀಲಿಸಿದರು. ಅಕ್ಟೋಬರ್ 2ರಂದು ರೋಹ್ಟಾಂಗ್ ಗೆ ಭೇಟಿ ನೀಡಿದ ಸಿಂಗ್ ಅವರನ್ನು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಸ್ವಾಗತಿಸಿದರು.
ಹಿಮಾಚಲ ಪ್ರದೇಶದ ರೋಹ್ಟಾಂಗ್ನಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನೆರವೇರಲಿದೆ. 9.02 ಕಿ.ಮೀ ಉದ್ದದ ಅಟಲ್ ಸುರಂಗವು ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾಗಿದೆ. ಇದರಿಂದಾಗಿ ಮನಾಲಿ ಮತ್ತು ಲೇಹ್ ನಡುವಿನ 46 ಕಿ.ಮೀ ರಸ್ತೆ ಪ್ರಯಾಣವು 4 ರಿಂದ 5 ಗಂಟೆಗಳವರೆಗೆ ಕಡಿಮೆಯಾಗಲಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಗೆ ಕೊರೋನಾ ಸೋಂಕು
ಈ ಮೊದಲು ಕಣಿವೆಯಲ್ಲಿ ಪ್ರತಿ ವರ್ಷ ಸುಮಾರು 6 ತಿಂಗಳುಗಳ ಕಾಲ ಭಾರೀ ಹಿಮಪಾತದಿಂದಾಗಿ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ. ಅಟಲ್ ಸುರಂಗವನ್ನು ಪಿರ್ ಪಂಜಾಲ್ ಶ್ರೇಣಿಯಲ್ಲಿ ಮಧ್ಯಮ ಸಮುದ್ರ ಮಟ್ಟದಿಂದ 3,000 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗಿದೆ.
ಇದು ಮನಾಲಿ ಮತ್ತು ಲೇಹ್ ನಡುವಿನ ರಸ್ತೆ ದೂರವನ್ನು 46 ಕಿ.ಮೀ ಕಡಿಮೆ ಮಾಡಲಿದೆ ಮತ್ತು ಸುಮಾರು ಐದರಿಂದ ಆರು ಗಂಟೆಗಳವರೆಗೆ ಪ್ರಯಾಣದ ಅವಧಿ ಕಡಿಮೆ ಆಗಲಿದೆ
Our Website : https://saakshatv.com/
Subscribe Now on YouTube – https://www.youtube.com/channel/UCJKH.
Like us on Facebook: https://www.facebook.com/saakshatv/
Follow us on Twitter : https://twitter.com/SaakshaTv
Follow us on Instagram : https://www.instagram.com/saaksha_tv/ Subscribe to our Telegram Channel : https://t.me/saakshatv