ಹೋಳಿ ಹಬ್ಬದ ಶುಭಾಶಯ ಹೇಳಿದ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್
ನವದೆಹಲಿ: ಗುರುವಾರ ದೇಶಾದ್ಯಂತ ಹೋಳಿ ಹಬ್ಬ ಆಚರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜನರಿಗೆ ಶುಭಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಪರಸ್ಪರ ಪ್ರೀತಿ, ವಾತ್ಸಲ್ಯ ಮತ್ತು ಭ್ರಾತೃತ್ವದ ಸಂಕೇತವಾದ ಈ ಹೋಳಿ ಹಬ್ಬವು ನಿಮ್ಮ ಜೀವನದಲ್ಲಿ ಸಂತೋಷದ ಬಣ್ಣವನ್ನು ತರಲಿ ಎಂದು ಹೋಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
आप सभी को होली की हार्दिक शुभकामनाएं। आपसी प्रेम, स्नेह और भाईचारे का प्रतीक यह रंगोत्सव आप सभी के जीवन में खुशियों का हर रंग लेकर आए।
— Narendra Modi (@narendramodi) March 18, 2022
ಬಣ್ಣಗಳ ಹಬ್ಬವಾದ ಹೋಳಿಯು ಸಮುದಾಯದ ಸೌಹಾರ್ದತೆ ಮತ್ತು ಸಾಮರಸ್ಯದ ಜೀವಂತ ಉದಾಹರಣೆಯಾಗಿದೆ. ಇದು ವಸಂತ ಆಗಮನದ ಶುಭ ಗಳಿಗೆಯನ್ನು ತರುತ್ತದೆ. ಈ ಹಬ್ಬವು ಎಲ್ಲ ದೇಶವಾಸಿಗಳ ಜೀವನದಲ್ಲಿ ಸಂತೋಷ, ಉತ್ಸಾಹ ಮತ್ತು ಹೊಸ ಶಕ್ತಿಯನ್ನು ತುಂಬಲಿ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
https://twitter.com/rashtrapatibhvn/status/1504649380758192131?ref_src=twsrc%5Etfw%7Ctwcamp%5Etweetembed%7Ctwterm%5E1504649380758192131%7Ctwgr%5E%7Ctwcon%5Es1_&ref_url=https%3A%2F%2Fwww.etvbharat.com%2Fkannada%2Fkarnataka%2Fbharat%2Fprime-minister-modi-president-kovind-gave-holi-wishes-to-people%2Fka20220318085642526







