ಜಿಲ್ಲಾಧ್ಯಕ್ಷರ ಕಾಲನ್ನು ಸ್ಪರ್ಶಿಸಿದ ಪ್ರಧಾನಿ ಮೋದಿ Saaksha Tv
ಲಕ್ನೋ: ಬಿಜೆಪಿಯ ಉನ್ನಾವೊ ಜಿಲ್ಲಾಧ್ಯಕ್ಷರ ಕಾಲನ್ನು ಪ್ರಧಾನಿ ಮೋದಿ ಸ್ಪರ್ಶಿಸಿದ್ದಾರೆ.
ಭಾನುವಾರ ಉತ್ತರ ಪ್ರದೇಶದ ಚುನಾವಣಾ ರ್ಯಾಲಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದರು. ಈ ವೇಳೆ ಬಿಜೆಪಿಯ ಯುಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಮತ್ತು ಬಿಜೆಪಿಯ ಉನ್ನಾವೊ ಜಿಲ್ಲಾಧ್ಯಕ್ಷ ಅವಧೇಶ್ ಕಟಿಯಾರ್ ಶ್ರೀರಾಮನ ವಿಗ್ರಹವನ್ನು ಮೋದಿ ಅವರಿಗೆ ನೀಡಿದರು.
ಈ ವೇಳೆ ಅವಧೇಶ್ ಕಟಿಯಾರ್ ಅವರು ವಿಗ್ರಹವನ್ನು ನೀಡಿದ ಬಳಿಕ, ಕೆಳಗೆ ಬಾಗಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಆಗ ಕಟಿಯಾರ್ ಅವರನ್ನು ತಕ್ಷಣವೇ ಕಾಲಿಗೆ ಬೀಳುವುದನ್ನು ನಿಲ್ಲಿಸುವಂತೆ ಮೋದಿ ಸೂಚಿಸಿ, ನನ್ನ ಪಾದಗಳನ್ನು ಮುಟ್ಟಬೇಡಿ ಎಂದು ಅವಧೇಶ್ ಕಟಿಯಾರ್ ಅವರ ಕಾಲನ್ನು ಮೋದಿ ಅವರು ಸ್ಪರ್ಶಿಸಿದರು.
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಬಿಜೆಪಿಯಿಂದ ಉನ್ನಾವೊ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಅವಧೇಶ್ ಕಟಿಯಾರ್ ಅವರು ಈ ಹಿಂದೆ ಉನ್ನಾವೊದಲ್ಲಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಉತ್ತರ ಪ್ರದೇಶದ 403 ಸದಸ್ಯ ಬಲದ ವಿಧಾನಸಭೆಗೆ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಉನ್ನಾವೊ ಜಿಲ್ಲೆಯು ಆರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಫೆಬ್ರವರಿ 23 ರಂದು ಉತ್ತರಪ್ರದೇಶದಲ್ಲಿ ನಾಲ್ಕನೇ ಹಂತದ ಮತದಾನ ನಡೆಯಲಿದೆ. ಮಾರ್ಚ್ 7 ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.