ಪ್ರಧಾನಿ ಮೋದಿಯ ಸ್ವದೇಶಿ ಮಂತ್ರಕ್ಕೆ ಬೆದರಿದ ಅಮೆರಿಕಾ, ಚೀನಾ
ಹೊಸದಿಲ್ಲಿ, ಜೂನ್ 11: ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ವಸ್ತು ಬಳಸಿ ಸ್ವಾವಲಂಬಿ ಭಾರತವನ್ನಾಗಿಸಿ ಎಂದು ದೇಶದ ಜನರಿಗೆ ಕರೆಕೊಟ್ಟಿದ್ದರು. ಇದೀಗ ಭಾರತದ ಸ್ವದೇಶಿ ಆಂದೋಲನಕ್ಕೆ ಬೆದರಿರುವ ಇತರೆ ರಾಷ್ಟ್ರಗಳು ಭಾರತೀಯರ ದಾರಿ ತಪ್ಪಿಸಲು ತರ ತರದ ಪ್ರಯತ್ನ ನಡೆಸುತ್ತಿದೆ.
ಚೀನಾದ ಅಪ್ಲಿಕೇಶನ್ ಟಿಕ್‌ಟಾಕ್ ಗೆ ಸಡ್ಡು ಹೊಡೆದು ತಯಾರಾದ ಭಾರತದ ಮಿತ್ರಾನ್ ಆ್ಯಪ್ ಒಂದು ತಿಂಗಳಲ್ಲಿ ಭಾರತೀಯರ ಮೆಚ್ಚುಗೆ ಗಳಿಸಿ ಗೂಗಲ್ ಪ್ಲೇ ಸ್ಟೋರ್ ನಿಂದ 5 ಮಿಲಿಯನ್ ಗಿಂತಲೂ ಹೆಚ್ಚು ಡೌನ್‌ಲೋಡ್ ಆಗಿತ್ತು. ಅಷ್ಟೇ ಅಲ್ಲ ಅಲ್ಲಿಯವರೆಗೆ ಭಾರತದಲ್ಲಿ ಜನಪ್ರಿಯವಾಗಿದ್ದ ಟಿಕ್ ಟಾಕ್ ಆ್ಯಪ್ ಅನ್ನು ಭಾರತೀಯರು ತಮ್ಮ ಮೊಬೈಲ್ ನಿಂದ ಅನ್ ಇನ್ ಸ್ಟಾಲ್ ಮಾಡಿದ ಪರಿಣಾಮ ಟಿಕ್ ಟಾಕ್ ರೇಟಿಂಗ್ ಕೂಡ ಕಡಿಮೆ ಆಯಿತು.
ಭಾರತದ ಆ್ಯಪ್ ಮಿತ್ರಾನ್ ಜನಪ್ರಿಯತೆ ನೋಡಿ ಬೆದರಿದ ಅಮೆರಿಕ ಮೂಲದ ಗೂಗಲ್ ಸಂಸ್ಥೆ ಒಂದೆಡೆ ಟಿಕ್‌ಟಾಕ್ ರೇಟಿಂಗ್ ಅನ್ನು ಜಾಸ್ತಿ ಮಾಡಲು ಇನ್ನಿಲ್ಲದ ಪ್ರಯತ್ನ ನಡೆಸಿದರೆ ಮತ್ತೊಂದೆಡೆ ಭಾರತದ ಮಿತ್ರಾನ್ ಜನಪ್ರಿಯತೆಯಿಂದ ಹತಾಶೆಗೊಳಗಾದ ಪಾಕಿಸ್ತಾನ ಮಿತ್ರಾನ್
ಆ್ಯಪ್ ನ ಮೂಲ ಕೋಡ್ ನನ್ನದು ಎಂದಿತು. ಪಾಕಿಸ್ತಾನದ ಸಾಫ್ಟ್‌ವೇರ್ ಡೆವಲಪರ್ ಕಂಪನಿ ಕ್ಯೂಬಾಕ್ಸಸ್‌ನಿಂದ 2,600 ರೂಪಾಯಿಗೆ ಮೂಲ ಕೋಡ್ ಅನ್ನು ಖರೀದಿಸಲಾಗಿದೆ ಎಂದು ಸುದ್ದಿ ಮಾಡಿತು. ಭಾರತದ ಮಾಧ್ಯಮಗಳು ಕೂಡ ಮಿತ್ರಾನ್ ಆ್ಯಪ್ ಪಾಕಿಸ್ತಾನದ್ದು ಎಂದು ಇನ್ನಷ್ಟು ಸುದ್ದಿ ಮಾಡುವಲ್ಲಿ ಯಶಸ್ವಿಯಾದವು. ಇತ್ತ ಪಾಕಿಸ್ತಾನ ನನ್ನಿಂದ ಮಿತ್ರಾನ್ ಆ್ಯಪ್ ಖರೀದಿಸಲಾಗಿದೆ ಎಂದಿದ್ದೇ ತಡ ಗೌಪ್ಯತೆ ನೀತಿಯ ಕಾರಣ ನೀಡಿ ಗೂಗಲ್ ಪ್ಲೇ ಸ್ಟೋರ್ ಭಾರತದ ಮಿತ್ರಾನ್ ಆ್ಯಪ್ ಗೆ ಗೇಟ್ ಪಾಸ್ ಕೊಟ್ಟಿತು.
ಆದರೆ ಇದೀಗ ಮಿತ್ರಾನ್ ಆ್ಯಪ್ ಅನ್ನು ಸಿದ್ಧಪಡಿಸಿರುವ ಶಿವಾಂಕ್ ಅಗರ್ವಾಲ್ ಮತ್ತು ಅನೀಶ್ ಖಂಡೇಲ್ವಾಲ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಮಿತ್ರಾನ್ ಆ್ಯಪ್ ನ ಮೂಲ ಕೋಡ್ ಪಾಕಿಸ್ತಾನ ತನ್ನ ಕ್ಯೂಬಾಕ್ಸಸ್ ಸಂಸ್ಥೆಯದು ಎಂದಿರುವುದು ಬರೀ ಸುಳ್ಳು. ಪಾಕಿಸ್ತಾನದ ಕೋಡ್ ಅನ್ನು ನಾವು ಖರೀದಿಸಿಯೂ ಇಲ್ಲ ಮತ್ತು ಅದರ ಅವಶ್ಯಕತೆಯೂ ನಮಗಿಲ್ಲ. ಆರಂಭಿಕ ಮೂಲ ಮಾದರಿಯ ಕೋಡಿಂಗ್ ಅನ್ನು ನಾವು ಕಾನೂನಾತ್ಮಕ ಮಾರ್ಗಸೂಚಿ ಹಾಗೂ ನಿಯಮಾವಳಿಗಳನ್ನು ಅನುಸರಿಸಿ ಆಸ್ಟ್ರೇಲಿಯಾದ ಕಂಪನಿಯಾದ ಎನ್ವಾಟೋದಿಂದ ಖರೀದಿ ಮಾಡಿದ್ದೇವೆ. ನಮ್ಮದೇ ಹೊಸದಾದ ಆ್ಯಪ್ ಅನ್ನು ಅಭಿವೃದ್ಧಿ ಪಡಿಸುವಾಗ ಮೂಲ ಕೋಡಿಂಗ್ ಖರೀದಿ ಮಾಡಿ, ಅದನ್ನು ಬದಲಾವಣೆ ಮಾಡಿಕೊಳ್ಳುವುದು ಸಹಜ ಪ್ರಕ್ರಿಯೆ. ಆದ್ದರಿಂದ ತನ್ನ ಕೋಡ್ ಅನ್ನು ಕದಿಯಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆ ಅಪ್ಪಟ ಸುಳ್ಳು . ನಮಗೆ ಪಾಕಿಸ್ತಾನದ ಸಂಪರ್ಕವಿಲ್ಲ, ಬಳಕೆದಾರರ ಡೇಟಾವನ್ನು ಭಾರತೀಯ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಗೂಗಲ್ ಪ್ಲೇ ಸ್ಟೋರ್ ನಿಂದ ಮಿತ್ರಾನ್ ಆ್ಯಪ್ ತೆಗೆದು ಹಾಕಲಾಗಿರುವ ಬಗ್ಗೆ ಸೃಷ್ಟಿಕರಣ ನೀಡಿದ ಅವರು ಗೂಗಲ್ ಸಂಸ್ಥೆ ಆ್ಯಪ್ ಗೆ ಸಂಬಂಧಿಸಿದಂತೆ ಕೆಲವೊಂದು ದಾಖಲೆಗಳನ್ನು ಕೇಳಿದೆ. ಅದನ್ನು ನೀಡುತ್ತಿದ್ದೇವೆ. ಆದಷ್ಟೂ ಬೇಗ ಪ್ಲೇ ಸ್ಟೋರ್ ನಲ್ಲಿ ಮಿತ್ರಾನ್ ಆ್ಯಪ್ ಪುನಃ ಬರಲಿದೆ ಎಂದು ಹೇಳಿದರು.







