ನವದೆಹಲಿ: ಕೃಷಿ ಮೂಲಸೌಕರ್ಯ ನಿಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದ್ದಾರೆ. ಕೃಷಿಕ ಸಮುದಾಯಕ್ಕೆ ಹಣಕಾಸು ನೆರವು ಕಲ್ಪಿಸಲು ಕೃಷಿ ಮೂಲಸೌಕರ್ಯ ನಿಧಿಯಡಿ 1 ಲಕ್ಷ ಕೋಟಿ ರೂಪಾಯಿಯ ಯೋಜನೆ ಇದಾಗಿದ್ದು, ಈ ಯೋಜನೆ ಅನ್ವಯ ರೂ. 17,000 ಕೋಟಿ ನೆರವಿನಲ್ಲಿ ಆರನೇ ಕಂತಿನ ಮೊತ್ತವನ್ನು ಒಟ್ಟು 8.5 ಕೋಟಿ ರೂಪಾಯಿ ರೈತರಿಗೆ ನೆರವಾಗುವಂತೆ ಬಿಡುಗಡೆ ಮಾಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ಭಾಗಗಳ ರೈತ ಸಂಘ ಸದಸ್ಯರ ಜೊತೆಗೆ ಸಂವಾದ ನೆಡೆಸಿದ ಮೋದಿ ಅವರು ಕರ್ನಾಟಕದ ಹಾಸನ ಉಗಣೆ ಪತ್ತಿನ ರೈತ ಸಂಘದ ಸದಸ್ಯರ ಜೊತೆಗೂ ಸಂವಾದ ನಡೆಸಿದ್ದು, ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ಅಲ್ಲದೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.