ವೈದ್ಯಕೀಯ ಅಧ್ಯಯನ ಮಾಡುವರಿಗೆ ಗುಡ್ ನ್ಯೂಸ್ ನೀಡಿದ ಪ್ರಧಾನಿ ಮೋದಿ
ನವದೆಹಲಿ: ಇಂದು ಏ 7 ವಿಶ್ವ ಆರೋಗ್ಯ ದಿನವಾಗಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತರಿಗೆ ಶುಭ ಹಾರೈಸಿ, ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ವಿಶ್ವ ಆರೋಗ್ಯ ದಿನಾಚರಣೆ ಕುರಿತು ಮಾತನಾಡಿದ ಅವರು ಈ ದಿನವನ್ನು ನಮ್ಮ ಆರೋಗ್ಯ ನಮ್ಮ ಗ್ರಹ’ (ಅವರ್ ಪ್ಲಾನೆಟ್, ಅವರ್ ಹೆಲ್ತ್) ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತದೆ. ಇನ್ನೂ ವೈದ್ಯಕೀಯ ಅಧ್ಯಯನ ಮಾಡುವರು ಸ್ಥಳೀಯ ಭಾಷೆಯಲ್ಲಿಯೇ ಅಧ್ಯಯನ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ ಕಳೆದ 8 ವರ್ಷಗಳಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆಯಾಗಿದೆ. ಹಲವಾರು ಹೊಸ ವೈದ್ಯಕೀಯ ಕಾಲೇಜುಗಳು ತಲೆ ಎತ್ತಿದ್ದು, ಸ್ಥಳೀಯ ಭಾಷೆಗಳಲ್ಲೇ ವೈದ್ಯಕೀಯ ಅಧ್ಯಯನವನ್ನು ಸಕ್ರಿಯಗೊಳಿಸಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ಇದು ಅಸಂಖ್ಯಾತ ಯುವಸಮೂಹದ ಆಕಾಂಕ್ಷಿಗಳಿಗೆ ತಳಹದಿ ಹಾಕಿಕೊಡಲಿದೆ ಎಂದು ಆಶ್ವಾಸನೆ ನೀಡಿದ್ದಾರೆ.
https://twitter.com/narendramodi/status/1511881993176649729?ref_src=twsrc%5Etfw%7Ctwcamp%5Etweetembed%7Ctwterm%5E1511881993176649729%7Ctwgr%5E%7Ctwcon%5Es1_&ref_url=https%3A%2F%2Fpublictv.in%2Fworld-health-day-2022-pm-modi-expresses-gratitude-towards-health-sector%2F
ಇನ್ನೂ ನಮ್ಮ ರಾಷ್ಟ್ರವು ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣೆ ಯೋಜನೆಯಾದ ಆಯುಷ್ಮಾನ್ ಭಾರತ್ಗೆ ನೆಲೆಯಾಗಿದೆ ಎಂಬುದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ತರುತ್ತದೆ. ಪ್ರಧಾನಮಂತ್ರಿ ಜನ್ಧನ್ ಔಷಧಿಯಂತಹ ಯೋಜನೆಗಳ ಫಲಾನುಭವಿಗಳೊಂದಿಗೆ ನಾನು ಸಂವಾದ ನಡೆಸಿದಾಗ, ಅವರಿಂದ ಬಂದ ಅಭಿಪ್ರಾಯಗಳಿಂದ ನನಗೂ ಸಂತೋಷವಾಗಿದೆ.
ಕೈಗೆಟುಕುವ ದರದಲ್ಲಿ ಆರೋಗ್ಯ ಸೌಕರ್ಯಗಳನ್ನು ಕಲ್ಪಿಸುತ್ತಾ ಬಡ ಮತ್ತು ಮಧ್ಯಮ ವರ್ಗದವರಿಗೆ ಗಮನಾರ್ಹ ಉಳಿತಾಯವನ್ನೂ ಖಾತ್ರಿಪಡಿಸಿದೆ. ಇದೇ ಸಮಯದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಹೆಚ್ಚಿಸಲು ಆಯುಷ್ಮಾನ್ ಆರೋಗ್ಯ ಕಾರ್ಡ್ ಅನ್ನು ಬಲಪಡಿಸಲು ಮುಂದಾಗುತ್ತಿದ್ದೇವೆ ಎಂದು ಹೇಳಿದ್ದಾರೆ.
ಹಾಗೇ ಈ ದಿನವು ಸಾಂಕ್ರಾಮಿಕ, ಕಲುಷಿತ ಗ್ರಹ, ಕ್ಯಾನ್ಸರ್, ಅಸ್ತಮಾ, ಹೃದ್ರೋಗದಂತಹ ಕಾಯಿಲೆಗಳ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಹಾಗಾಗಿ ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯದ ಮೇಲೆ ತುರ್ತು ಕ್ರಮಗಳ ಮೇಲೆ ಜಾಗತಿಕ ಗಮನವನ್ನು ಕೇಂದ್ರೀಕರಿಸುತ್ತದೆ ಎಂದು ತಿಳಿಸಿದ್ದಾರೆ.









