ಪ್ರಧಾನಿ ನರೇಂದ್ರ ಮೋದಿ ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಮಂತ್ರಿ
ಹೊಸದಿಲ್ಲಿ, ಅಗಸ್ಟ್ 13: ಜವಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ಡಾ.ಮನಮೋಹನ್ ಸಿಂಗ್ ಅವರ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಮಂತ್ರಿಯಾಗಿದ್ದಾರೆ ಮತ್ತು ಕಾಂಗ್ರೆಸೇತರ ಮೊದಲ ಪ್ರಧಾನಿಯಾಗಿದ್ದಾರೆ. ಆಗಸ್ಟ್ 15 ರಂದು ಪ್ರಧಾನಿ ಮೋದಿ ಕೆಂಪು ಕೋಟೆಯಿಂದ ತಮ್ಮ ಏಳನೇ ಸ್ವಾತಂತ್ರ್ಯ ದಿನಾಚರಣೆಯ ಸಂದೇಶವನ್ನು ದೇಶವಾಸಿಗಳಿಗೆ ನೀಡಲಿದ್ದಾರೆ.

ನರೇಂದ್ರ ಮೋದಿ ಅವರು 2014 ರ ಮೇ 26 ರಂದು ದೇಶದ 14 ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2019 ರ ಮೇ 30 ರಂದು ಪ್ರಧಾನ ಮಂತ್ರಿಯಾಗಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಜವಹರಲಾಲ್ ನೆಹರು ಇದುವರೆಗೆ ಭಾರತದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿಯಾಗಿದ್ದಾರೆ . ಅವರ ಅಧಿಕಾರಾವಧಿಯು ಸುಮಾರು 17 ವರ್ಷಗಳ ಕಾಲ ನಡೆಯಿತು ಮತ್ತು ನಂತರ ಅವರ ಮಗಳು ಇಂದಿರಾ ಗಾಂಧಿ ಕ್ರಮವಾಗಿ 11 ವರ್ಷ ಮತ್ತು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಡಾ. ಮನಮೋಹನ್ ಸಿಂಗ್ ಅವರು ತಲಾ ಐದು ವರ್ಷಗಳ ಸತತ ಎರಡು ಅವಧಿಗೆ ಸೇವೆ ಸಲ್ಲಿಸಿದರು.

ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ಇತರ ಕಾಂಗ್ರೆಸೇತರ ಪ್ರಧಾನ ಮಂತ್ರಿಗಳು ಮೊರಾರ್ಜಿ ದೇಸಾಯಿ (ಮಾರ್ಚ್ 24, 1977 – ಜುಲೈ 28, 1979), ಚರಣ್ ಸಿಂಗ್ (ಜುಲೈ 28, 1979 – ಜನವರಿ 14, 1980), ವಿಶ್ವನಾಥ್ ಪ್ರತಾಪ್ ಸಿಂಗ್ (ಡಿಸೆಂಬರ್ 2, 1989 – ನವೆಂಬರ್ 10, 1990), ಚಂದ್ರ ಶೇಖರ್ (ನವೆಂಬರ್ 10, 1990 – ಜೂನ್ 21, 1991), ಎಚ್.ಡಿ. ದೇವೇಗೌಡ (ಜೂನ್ 1, 1996 – ಏಪ್ರಿಲ್ 21, 1997) ಮತ್ತು ಗುಜ್ರಾಲ್ (ಏಪ್ರಿಲ್ 21, 1997 – ಮಾರ್ಚ್ 19, 1998).








