ಬ್ಯಾಂಕ್ ದಿವಾಳಿಗೊಂಡರೆ ಗ್ರಾಹಕರಿಗೆ 5 ಲಕ್ಷ ಠೇವಣಿ ವಿಮೆ, ನರೇಂದ್ರ ಮೋದಿ ಹೇಳಿಕೆ….
ಬ್ಯಾಂಕ್ ಠೇವಣಿ ದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನ ನೀಡಿದೆ ಇನ್ನು ಮುಂದೆ ಗ್ರಾಹಕರು ಹಣ ಠೇವಣಿ ಮಾಡುವ ಬ್ಯಾಂಕ್ಗಳು ದಿವಾಳಿಗೊಂಡರೆ 5 ಲಕ್ಷ ಠೇವಣಿ ವಿಮೆಯನ್ನ ಸರ್ಕಾರ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. “ಬ್ಯಾಂಕ್ಗಳು ದಿವಾಳಿಗೊಂಡರೆ ಠೇವಣಿದಾರರು ತಮ್ಮ ಹಣವನ್ನು ಸಮಯಕ್ಕೆ ಸರಿಯಾಗಿ ವಾಪಸ್ ಪಡೆಯಲು ಸರ್ಕಾರವು ಕಾನೂನನ್ನು ಬದಲಾಯಿಸಿದೆ” ಎಂದು ದೆಹಲಿಯಲ್ಲಿ ಆಯೋಜಿಸಲಾದ ಬ್ಯಾಂಕ್ ಠೇವಣಿ ವಿಮಾ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಹೇಳಿದರು.
“ಬ್ಯಾಂಕ್ಗಳನ್ನು ಉಳಿಸಬೇಕಾದರೆ, ಠೇವಣಿದಾರರಿಗೆ ಭದ್ರತೆಯನ್ನು ಒದಗಿಸಬೇಕು. ನಾವು ಬ್ಯಾಂಕ್ಗಳನ್ನು ಉಳಿಸಿದ್ದೇವೆ ಮತ್ತು ಠೇವಣಿದಾರರಿಗೆ ಭದ್ರತೆಯನ್ನೂ ಒದಗಿಸಿದ್ದೇವೆ. “ಇಂದು ಬ್ಯಾಂಕಿಂಗ್ ಕ್ಷೇತ್ರ ಮತ್ತು ಖಾತೆದಾರರಿಗೆ ಮಹತ್ವದ ದಿನವಾಗಿದೆ. ಸರ್ಕಾರವು ಯಾವಾಗಲೂ ‘ಠೇವಣಿದಾರರಿಗೆ ಮೊದಲ ಪ್ರಾಶಸ್ತ್ಯ ನೀಡಿದೆ ‘ ಎಂಬ ಅಂಶವನ್ನು ಇಂದು ಸಂಕೇತಿಸುತ್ತದೆ. ಠೇವಣಿದಾರರು ಮೊದಲು, ಮತ್ತು ಅವರ ಅಗತ್ಯತೆಗಳ ಬಗ್ಗೆ ನಮ್ಮ ಮೊದಲ ಆದ್ಯತೆ ಮತ್ತು ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದರು.