Siddaramaiah | ಪರಿಹಾರ ಕೊಡೋದನ್ನ ತಪ್ಪಿಸಲು ಬಿಜೆಪಿ ಸಾವಿನ ಸುಳ್ಳು ಲೆಕ್ಕ
ಬೆಂಗಳೂರು : ಕೋವಿಡ್ ಕಾಯಿಲೆಯಿಂದ ಸತ್ತವರಿಗೆ ಪರಿಹಾರ ಕೊಡುವುದನ್ನು ತಪ್ಪಿಸಲು ಬಿಜಪಿ ಸರ್ಕಾರ ಸಾವಿನ ಸುಳ್ಳು ಲೆಕ್ಕ ಹೇಳಿ ಮೋಸ ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಜನವರಿ 2020 ರಿಂದ ಡಿಸೆಂಬರ್ 2021 ರ ಅವಧಿಯಲ್ಲಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಕೋವಿಡ್ ಸಂಬಂಧಿ ಸಾವುಗಳು ಭಾರತದಲ್ಲಿಯೇ ಉಂಟಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಗಳ ಮೂಲಕ ಟೀಕೆ ಮಾಡಿದ್ದಾರೆ.
ಸಿದ್ದರಾಮಯ್ಯ ತಮ್ಮ ಟ್ವೀಟ್ ನಲ್ಲಿ…
ಕೋವಿಡ್ ಕಾಯಿಲೆಯಿಂದ ಸತ್ತವರ ಸಂಖ್ಯೆಯನ್ನು ಬಚ್ಚಿಟ್ಟಿರುವ ಕೇಂದ್ರ ಬಿಜೆಪಿ ಸರ್ಕಾರದ ಸುಳ್ಳುಗಳ ಸರಮಾಲೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಯಲುಗೊಳಿಸಿದೆ. ಕೋವಿಡ್ ಸಾವಿನ ಸಂಖ್ಯೆ ಕೇಂದ್ರ ಸರ್ಕಾರದ ಪ್ರಕಾರ 4.81 ಲಕ್ಷ ಮತ್ತು ಡಬ್ಲ್ಯುಎಚ್ಒ ಪ್ರಕಾರ 47.40 ಲಕ್ಷ.
ಕೋವಿಡ್ ಕಾಯಿಲೆಯಿಂದ ಸತ್ತವರಿಗೆ ಪರಿಹಾರ ಕೊಡುವುದನ್ನು ತಪ್ಪಿಸಲು ಬಿಜಪಿ ಸರ್ಕಾರ ಸಾವಿನ ಸುಳ್ಳು ಲೆಕ್ಕ ಹೇಳಿ ಮೋಸ ಮಾಡಿದೆ. ಇದರಿಂದ ಕೋವಿಡ್ ನಿಂದ ಸಾವಿಗೀಡಾದ ಲಕ್ಷಾಂತರ ಮಂದಿಯ ಕುಟುಂಬಕ್ಕೆ ಪರಿಹಾರವೇ ಸಿಕ್ಕಿಲ್ಲ. ಕೋವಿಡ್ ಸಾವಿನ ಮರು ಎಣಿಕೆ ಮಾಡಿದರೆ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ ಸಾವಿನ ಸಂಖ್ಯೆ ಕೇವಲ 37,603 ಎಂದು ರಾಜ್ಯ @BJP4Karnataka ಸರ್ಕಾರ ಹೇಳಿತ್ತು. ಕೆಪಿಸಿಸಿ ಸಮೀಕ್ಷೆ ಪ್ರಕಾರ ಸಾವಿನ ಸಂಖ್ಯೆ 3.17 ಲಕ್ಷ ಆಗಿತ್ತು. ಅರವಿಂದ್ ಸುಬ್ರಹ್ಮಣ್ಯ ಮತ್ತು ಜೇಕಬ್ ಝಾ ಪ್ರಕಾರ ಸಾವಿನ ಸಂಖ್ಯೆ ನಾಲ್ಕು ಲಕ್ಷ. ಕಳೆದ ವರ್ಷದ ಜೂನ್ ತಿಂಗಳಲ್ಲಿಯೇ ನಾನು ಇದನ್ನು ಹೇಳಿದ್ದೆ. 3/7#COVID19
— Siddaramaiah (@siddaramaiah) May 7, 2022
ಕೋವಿಡ್ ಸಾವಿನ ಸಂಖ್ಯೆ ಕೇವಲ 37,603 ಎಂದು ರಾಜ್ಯ ಬಿಜೆಪಿ ಸರ್ಕಾರ ಹೇಳಿತ್ತು. ಕೆಪಿಸಿಸಿ ಸಮೀಕ್ಷೆ ಪ್ರಕಾರ ಸಾವಿನ ಸಂಖ್ಯೆ 3.17 ಲಕ್ಷ ಆಗಿತ್ತು. ಅರವಿಂದ್ ಸುಬ್ರಹ್ಮಣ್ಯ ಮತ್ತು ಜೇಕಬ್ ಝಾ ಪ್ರಕಾರ ಸಾವಿನ ಸಂಖ್ಯೆ ನಾಲ್ಕು ಲಕ್ಷ. ಕಳೆದ ವರ್ಷದ ಜೂನ್ ತಿಂಗಳಲ್ಲಿಯೇ ನಾನು ಇದನ್ನು ಹೇಳಿದ್ದೆ.
ಕೊರೊನಾ ಕಾಯಿಲೆಯಿಂದ ರಾಜ್ಯದಲ್ಲಿ ಈ ವರೆಗೆ 5 ಲಕ್ಷಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರುವ ಸಾಧ್ಯತೆ ಇದೆ. ಮರು ಸಮೀಕ್ಷೆ ಮೂಲಕ ಮೃತರ ಸಂಖ್ಯೆಯನ್ನು ಖಚಿತವಾಗಿ ತಿಳಿದುಕೊಂಡು ಮೃತರ ಕುಟುಂಬಕ್ಕೆ ಕನಿಷ್ಠ 4 ಲಕ್ಷ ರೂಪಾಯಿ ಪರಿಹಾರ ಕೊಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಜನತೆಗೆ ಉತ್ತರದಾಯಿಯಾಗಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಅಧಿಕೃತವಾದ ಮಾಹಿತಿಗಳನ್ನು ಮುಚ್ಚಿಟ್ಟು ದ್ರೋಹ ಎಸಗುತ್ತಿದೆ. ಸತ್ಯ ಸಂಗತಿ ಬಯಲಾದರೆ ತಮ್ಮ ಬಣ್ಣ ಬಯಲಾಗುತ್ತಿದೆ ಎಂಬ ಭಯದಿಂದ ಸುಳ್ಳುಗಳ ಮಾಲೆ ಹೆಣೆಯುತ್ತಿದೆ.
ಜನತೆಗೆ ಉತ್ತರದಾಯಿಯಾಗಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಅಧಿಕೃತವಾದ ಮಾಹಿತಿಗಳನ್ನು ಮುಚ್ಚಿಟ್ಟು ದ್ರೋಹ ಎಸಗುತ್ತಿದೆ. ಸತ್ಯ ಸಂಗತಿ ಬಯಲಾದರೆ ತಮ್ಮ ಬಣ್ಣ ಬಯಲಾಗುತ್ತಿದೆ ಎಂಬ ಭಯದಿಂದ ಸುಳ್ಳುಗಳ ಮಾಲೆ ಹೆಣೆಯುತ್ತಿದೆ. 5/7#COVID19
— Siddaramaiah (@siddaramaiah) May 7, 2022
ಕೋವಿಡ್ ಕಾಯಿಲೆಯನ್ನು ಔಷಧಿ ಮತ್ತು ಚಿಕಿತ್ಸೆಯ ಮೂಲಕ ಎದುರಿಸಬೇಕಾಗಿದ್ದ ಬಿಜೆಪಿ ಸರ್ಕಾರ ಸುಳ್ಳು ಮತ್ತು ಮೋಸಗಳಿಂದ ಎದುರಿಸಲು ಹೊರಟಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ 39 ಜನ ಸತ್ತಿದ್ದರೂ ರಾಜ್ಯ ಬಿಜೆಪಿ ಸರ್ಕಾರ ಮಾತ್ರ ಸತ್ತವರು ಮೂರು ಜನ ಎಂದು ಹೇಳಿತ್ತು.
2020ರಲ್ಲಿ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಒಟ್ಟು 36.5 ಲಕ್ಷ ಜನ ಸತ್ತಿರುವುದನ್ನು ಕೇಂದ್ರ ರಿಜಿಸ್ಟ್ರಾರ್ ಜನರಲ್ ಕಚೇರಿಯ ವರದಿ ಬಹಿರಂಗ ಪಡಿಸಿದೆ. ಆ ವರ್ಷ ಸಾವಿಗೀಡಾದ 81 ಲಕ್ಷ ಜನರಲ್ಲಿ ಶೇಕಡಾ 45ರಷ್ಟು ಜನ ಚಿಕಿತ್ಸೆ ಸಿಗದೆ ಮೃತ ಪಟ್ಟಿರುವುದು ಕಳವಳಕಾರಿ ಬೆಳವಣಿಗೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ..
Prime Minister should apologise for lie on COVID-19 deaths