ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಇಂದು ದೇಶದ ಎಲ್ಲಾ ಜನರು ದೀಪವನ್ನು ಬೆಳಗಿಸಿ ದೇಶಪ್ರೇಮ ಮೆರೆದಿದ್ದಾರೆ. ಅದರಂತೆ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ದೀಪವನ್ನು ಬೆಳಗುವ ಮೂಲಕ ಏಕತೆಯ ಸಂದೇಶ ಸಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ನಿವಾಸದಲ್ಲಿ 9 ಗಂಟೆಗೆ ವಿದ್ಯುತ್ ದೀಪವನ್ನು ಆರಿಸಿ 9 ನಿಮಿಷಗಳ ಕಾಲ ದೀಪವನ್ನು ಬೆಳಗಿದರು. ಈ ಮೂಲಕ ಇಡೀ ದೇಶಕ್ಕೆ ಕೊರೊನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಿ ಎಂಬ ಸಂದೇಶವನ್ನು ಸಾರಿದರು.








