ಭಾರತದ ‘ಸುಸ್ಥಿರ’ ಜೀವನ ವಿಧಾನವನ್ನು ಶ್ಲಾಘಿಸಿದ ಬ್ರಿಟನ್ ರಾಜಕುಮಾರ ಚಾರ್ಲ್ಸ್
ಲಂಡನ್, ಜುಲೈ 11: ಕೊರೋನವೈರಸ್ ಸಾಂಕ್ರಾಮಿಕ ರೋಗದ ಮಧ್ಯೆ ಭಾರತದ ‘ಸುಸ್ಥಿರ’ ಜೀವನ ವಿಧಾನವನ್ನು ಬ್ರಿಟನ್ ರಾಜಕುಮಾರ ಚಾರ್ಲ್ಸ್ ಶುಕ್ರವಾರ ಶ್ಲಾಘಿಸಿದ್ದಾರೆ. ದೇಶದ ವೈವಿಧ್ಯತೆ ಮತ್ತು ಸುಸ್ಥಿರ ಜೀವನ ವಿಧಾನ ವೈಯಕ್ತಿಕ ಪ್ರೇರಣೆಯಾಗಿದೆ ಮತ್ತು ಎಲ್ಲರಿಗೂ ಕಲಿಯಲು ಹೆಚ್ಚು ಸೂಕ್ತವಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತದ ತತ್ತ್ವಚಿಂತನೆಗಳು, ಮೌಲ್ಯಗಳು ಸುಸ್ಥಿರ ಜೀವನ ವಿಧಾನ, ಮಾನವೀಯತೆ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯದ ಸಂಬಂಧವನ್ನು ಒತ್ತಿಹೇಳಿದ ಪ್ರಿನ್ಸ್ ಚಾರ್ಲ್ಸ್ ಭಾರತದ ವೈವಿಧ್ಯತೆ ಮತ್ತು ಸುಸ್ಥಿರ ಜೀವನ ವಿಧಾನ ನಾವೆಲ್ಲರೂ ಕಲಿಯಬೇಕಾಗಿರುವುದು ಮತ್ತು ನಮಗೆಲ್ಲರಿಗೂ ಸ್ಫೂರ್ತಿ ಎಂದು ಇಂಡಿಯಾ ಗ್ಲೋಬಲ್ ವೀಕ್ 2020 ರಲ್ಲಿ ತಮ್ಮ ವರ್ಚುವಲ್ ಭಾಷಣದಲ್ಲಿ ಹೇಳಿದ್ದಾರೆ.
ಮೊದಲು ಜಗತ್ತನ್ನೇ ಅವರಿಸಿರುವ ಕೋವಿಡ್ -19 ಬಿಕ್ಕಟ್ಟಿನಿಂದ ಹೊರಗಡೆ ಬರಲು ಪ್ರಯತ್ನಿಸೋಣ, ಮತ್ತು ಬಳಿಕ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡೋಣ ಎಂದು ಪ್ರಿನ್ಸ್ ಚಾರ್ಲ್ಸ್ ಹೇಳಿದರು.
ನೈಸರ್ಗಿಕ, ಸಾಮಾಜಿಕ ಮತ್ತು ಭೌತಿಕ ಬಂಡವಾಳವನ್ನು ಸಮತೋಲನಗೊಳಿಸುವ ದೀರ್ಘಕಾಲೀನ ಮೌಲ್ಯಕ್ಕಾಗಿ ಸುಸ್ಥಿರ ಅರ್ಥವ್ಯವಸ್ಥೆ ಕಡೆ ಹೆಜ್ಜೆ ಹಾಕಲು ನಮಗೆ ಅವಕಾಶವಿದೆ. ಹೊಸ ಉದ್ಯೋಗಾವಕಾಶಗಳು, ಸಂಪೂರ್ಣ ಹೊಸ ಕೈಗಾರಿಕೆಗಳು ಮತ್ತು ನಿಜವಾದ ಸುಸ್ಥಿರತೆಗೆ ಬೇರೂರಿರುವ ಮಾರುಕಟ್ಟೆಗಳು ನಮ್ಮ ಹಿಡಿತದಲ್ಲಿವೆ ಎಂದು ಅವರು ಹೇಳಿದರು.