Prithvi Shaw : ಸೆಲ್ಫಿ ನೀಡಲು ನಿರಾಕರಿಸಿದ್ದಕ್ಕೆ ಪೃಥ್ವಿ ಶಾ ಕಾರಿನ ಮೇಲೆ ದಾಳಿ…
ಕ್ರಿಕೆಟಿಗೆ ಪೃಥ್ವಿ ಶಾ ಸೆಲ್ಫಿ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ಅವರ ಕಾರಿನ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿರುವ ಘಟನೆ ಬುಧವಾರ ರಾತ್ರಿ ಮುಂಬೈನಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಪೃಥ್ವಿ ಶಾ ತನ್ನ ಸ್ನೇಹಿತನೊಂದಿಗೆ ಬುಧವಾರ ಸಂಜೆ ಸ್ಟಾರ್ ಹೋಟೆಲ್‌ನ ಮ್ಯಾನ್ಸನ್ ಕ್ಲಬ್ ಆಫ್ ಸಹಾರಾಕ್ಕೆ ಹೋಗಿದ್ದಾಗ ಘಟನೆ ಜರುಗಿದೆ.
ಹೋಟೆಲ್‌ನಲ್ಲಿರುವ ಕ್ಲಬ್ ನಿಂದ ಹಿಂತಿರುಗಿ ಬರುವಾಗ ಇಬ್ಬರು ವ್ಯಕ್ತಿಗಳು ಪೃಥ್ವಿ ಶಾ ಬಳಿ ಸೆಲ್ಫಿ ಕೇಳಿದ್ದಾರೆ. ಪೃಥ್ವಿ ಶಾ ಅವರಿಗೆ ಸೆಲ್ಫಿ ನೀಡಿದ್ದಾರೆ. ಆದರೇ ಇಷ್ಟಕ್ಕೆ ಸುಮ್ಮನಾಗದ ಅವರು ಮತ್ತೊಮ್ಮೆ ಸೆಲ್ಫಿ ಕೇಳಿದ್ದಾರೆ. ಇದಕ್ಕೆ ಶಾ ನಿರಾಕರಿಸಿದ್ದಾರೆ. ಅಲ್ಲಿದ್ದ ಕ್ಲಬ್ ಮ್ಯಾನೇಜರ್ ಇಬ್ಬರನ್ನು ಕ್ಲಬ್ ನಿಂದ ಹೊರಗೆ ಕಳುಹಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅವರು ಕ್ಲಬ್ ನ ಹೊರಗಿನ ಪಾರ್ಕಿಂಗ್ ಸ್ಥಳದಲ್ಲಿ ಅವರಿಗಾಗಿ ಕಾದಿದ್ದಾರೆ. ಪೃಥ್ವಿ ಶಾ ಮತ್ತು ಆತನ ಸ್ನೇಹಿತ ಕಾರಿನ ಬಳಿ ಬಂದ ನಂತರ ಇಬ್ಬರು ಪೃಥ್ವಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿದ್ದಾರೆ.
ಆ ಕಾರು ಪೃಥ್ವಿ ಸ್ನೇಹಿತನದ್ದು. ಕಿಡಿಗೇಡಿಗಳು ಬೇಸ್‌ಬಾಲ್ ಬ್ಯಾಟ್ ತೆಗೆದುಕೊಂಡು ಕಾರಿನ ಗಾಜುಗಳನ್ನು ಒಡೆದು ಹಾಕಿದ್ದಾರೆ. ಆ ಬಳಿಕ 50,000 ರೂ ನೀಡುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಘಟನೆ ಬಳಿಕ ಪೃಥ್ವಿ ಶಾ ಮತ್ತೊಂದು ಕಾರಿನಲ್ಲಿ ಮನೆಗೆ ತೆರಳಿದ್ದರು.
ಆತನ ಸ್ನೇಹಿತ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನ ಸನಾ ಗಿಲ್ ಮತ್ತು ಶೋಭಿತ್ ಠಾಕೂರ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Prithvi Shaw : Attacked on Prithvi Shaw’s car for refusing to give a selfie…








