Prithvi Shaw | ಫಿಟ್ ನೆಸ್ ಪರೀಕ್ಷೆಯಲ್ಲಿ ಪಾಸ್ ಆಗದ ಪೃಥ್ವಿ ಶಾ
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಶಿಬಿರದಲ್ಲಿ ಐಪಿಎಲ್ ಆಟಗಾರರಿಗೆ ನಡೆದ ಫಿಟ್‌ನೆಸ್ ಪರೀಕ್ಷೆಯ ವಿವರಗಳನ್ನು ಪ್ರಮುಖ ರಾಷ್ಟ್ರೀಯ ಮಾಧ್ಯಮಗಳು ಬಹಿರಂಗಪಡಿಸಿವೆ.
ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ಪ್ರಮುಖ ಆಟಗಾರ ಪೃಥ್ವಿ ಶಾ ವಿಫಲರಾಗಿದ್ದಾರೆ.
ಯೊಯೊ ಟೆಸ್ಟ್‌ನಲ್ಲಿ ಹಾರ್ದಿಕ್ ಕನಿಷ್ಠ ಸ್ಕೋರ್ ಪಡೆದು ಉತ್ತೀರ್ಣರಾಗಿದ್ದು, ದೆಹಲಿಯ ಆರಂಭಿಕ ಆಟಗಾರ ರಿಷಬ್ ಪಂತ್ ಕನಿಷ್ಠ ಅಂಕವನ್ನು ಪಡೆದಿಲ್ಲ.
ಆದರೆ, ಇದು ಕೇವಲ ಫಿಟ್ನೆಸ್ ಪರೀಕ್ಷೆ ಅಷ್ಟೆ, ಇಲ್ಲಿ ವಿಫಲರಾದ್ರೂ ಐಪಿಎಲ್ ನಲ್ಲಿ ಆಡಬಹುದು ಎಂದು ಬಿಸಿಸಿಐ ತಿಳಿಸಿದೆ. ಹೀಗಾಗಿ ಐಪಿಎಲ್ ಫ್ರಾಂಚೈಸಿಗಳು ನಿಟ್ಟುಸಿರು ಬಿಟ್ಟಿವೆ.
ಯೊಯೊ ಟೆಸ್ಟ್ ನಲ್ಲಿ ಬಿಸಿಸಿಐ ನಿಗದಿಪಡಿಸಿದ ಕನಿಷ್ಠ ಸ್ಕೋರ್ 16.5. ಪೃಥ್ವ ಶಾ 15ಕ್ಕಿಂತ ಕಡಿಮೆ ಮತ್ತು ಹಾರ್ದಿಕ್ 17 ಕ್ಕಿಂತ ಹೆಚ್ಚು ಸ್ಕೋರ್ ಗಳಿಸಿದ್ದಾರೆ.









