ಭಾರತೀಯ ರೈಲ್ವೆಯಲ್ಲಿ ಖಾಸಗಿ ರೈಲುಗಳು: ಕರ್ನಾಟಕದ ಹೊಸ ಮಾರ್ಗಗಳು, ಸಮಯಗಳ ಪೂರ್ಣ ಪಟ್ಟಿ
ಹೊಸದಿಲ್ಲಿ, ಜುಲೈ5: ಭಾರತೀಯ ರೈಲ್ವೆ 30,000 ಕೋಟಿ ರೂ.ಗಳ ಮೆಗಾ ಖಾಸಗಿ ರೈಲು ಯೋಜನೆಗೆ ಅರ್ಹತೆಗಾಗಿ ಪಿಯುಷ್ ಗೋಯಲ್ ನೇತೃತದಲ್ಲಿ ಪ್ರಮುಖ ಹೆಜ್ಜೆ ಇಟ್ಟಿದೆ. ದೇಶದ ನಾನಾ ಕಡೆ 109 ಕಿಂತಲೂ ಹೆಚ್ಚು ಜೋಡಿ ಮಾರ್ಗಗಳನ್ನು ಗುರುತಿಸಲಾಗಿದ್ದು, ಮುಂಬರುವ ವರ್ಷಗಳಲ್ಲಿ ಭಾರತೀಯ ರೈಲ್ವೆಯು ಖಾಸಗಿ ಸಹಭಾಗಿತ್ವದಲ್ಲಿ ರೈಲ್ವೆ ಪ್ರಯಾಣಿಕರಿಗೆ ವಿಶ್ವ ದರ್ಜೆಯ ವೇಗ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣದ ಅನುಭವ ಸಿಗಲಿದೆ . ಖಾಸಗಿ ವಲಯಕ್ಕೆ ಬೇಕಾದ ಆಧುನಿಕ ರೈಲುಗಳು ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ತಯಾರಾಗಲಿದೆ.

160 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವಿರುವ ಖಾಸಗಿ ರೈಲುಗಳು, ಅತಿ ವೇಗದಲ್ಲಿ ಸಂಚರಿಸುವ ಭಾರತೀಯ ರೈಲ್ವೆ ಇಲಾಖೆಯ ರೈಲಿನ ಸಮಯವನ್ನು ತೆಗೆದುಕೊಳ್ಳಲಿದೆ.
ಭಾರತೀಯ ರೈಲ್ವೆ ಖಾಸಗಿ ರೈಲುಗಳ ಮಾರ್ಗಗಳನ್ನು 12 ಕ್ಲಸ್ಟರ್‌ಗಳಾಗಿ ವಿಂಗಡಿಸಲಾಗಿದೆ . ಆದ್ದರಿಂದ, ಯಾವ ಮಾರ್ಗಗಳನ್ನು ಗುರುತಿಸಲಾಗಿದೆ? ಈ ಖಾಸಗಿ ರೈಲುಗಳು ತೆಗೆದುಕೊಳ್ಳುವ ಉದ್ದೇಶಿತ ಸಮಯ ಎಷ್ಟು? ಈ ಖಾಸಗಿ ರೈಲುಗಳ ವೇಳಾಪಟ್ಟಿ ಏನು? ಪ್ರಯಾಣಕ್ಕೆ ತೆಗೆದುಕೊಂಡ ಸಮಯ ಮತ್ತು ಉದ್ದೇಶಿತ ನಿರ್ಗಮನ ಮತ್ತು ಆಗಮನದ ಸಮಯಗಳನ್ನು ಎಲ್ಲವನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ .
ಮುಂಬೈ ಕ್ಲಸ್ಟರ್-1
ಮುಂಬೈ ಕ್ಲಸ್ಟರ್-2
ದೆಹಲಿ ಕ್ಲಸ್ಟರ್-1
ದೆಹಲಿ ಕ್ಲಸ್ಟರ್-2
ಚಂಡಿಗಡ್
ಹೌರಾ
ಪಾಟ್ನಾ
ಪ್ರಯಾಗ್ರಾಜ್
ಸಿಕಂದರಾಬಾದ್
ಜೈಪುರ್
ಚೆನ್ನೈ
ಬೆಂಗಳೂರು
ಬೆಂಗಳೂರಿಂದ ರೈಲ್ವೆ ಮಾರ್ಗ ಸೂಚಿ ಈ ಕೆಳಕಂಡಂತಿದೆ
ಬೆಂಗಳೂರು ನಿಂದ ಗುವಾಹಟಿ , ಧರ್ಮಾವರಂ ಮೂಲಕ -58 ಗಂಟೆ 30 ನಿಮಿಷ (12:15 to 22:45)
ಗುವಾಹಟಿ ಯಿಂದ ಬೆಂಗಳೂರು – 57 ಗಂಟೆ ೧೦ ನಿಮಿಷ (23:50 to 09:00)
ಮೈಸೂರು ನಿಂದ ಭುಬನೇಶ್ವರ್ 27 ಗಂಟೆ 30 ನಿಮಿಷ (19:00 to 22:30)
ಭುಬನೇಶ್ವರ್ ದಿಂದ ಮೈಸೂರು – 26 ಗಂಟೆ and 15 ನಿಮಿಷ (04:00 to 06:15)
ದೆಹಲಿ ಯಿಂದ ಬೆಂಗಳೂರು -32 ಗಂಟೆ and 45 ನಿಮಿಷ (21:15 to 05:00)
ಬೆಂಗಳೂರು ನಿಂದ ದೆಹಲಿ – 33 ಗಂಟೆ and 05 ನಿಮಿಷ (20:15 to 05:20)
ಹೌರ ದಿಂದ ಬೆಂಗಳೂರು ಧರ್ಮಾವರಂ ಮೂಲಕ- 32 ಗಂಟೆ 50 ನಿಮಿಷ (08:00 to 16:50)
ಬೆಂಗಳೂರು ನಿಂದ ಹೌರಾ -34 ಗಂಟೆ and 15 ನಿಮಿಷ (23:45 to 10:00)
ರಾಂಚಿ ಯಿಂದ ಬೆಂಗಳೂರು 33 ಗಂಟೆ (06:00 to 15:00)
ಬೆಂಗಳೂರಿ ನಿಂದ ರಾಂಚಿ 34 ಗಂಟೆ (18:00 to 04:00)
ಆದರೆ ವಿಶೇಷವಾಗಿ ಕೇರಳದಿಂದ ಯಾವುದೇ ನಗರ ಕ್ಲಸ್ಟರ್ ಗೆ ಆಯ್ಕೆ ಆಗಿಲ್ಲ







