Priya Anand: ನಿತ್ಯಾನಂದನನ್ನು ಮದುವೆ ಆಗ್ತಾರಂತೆ ಪ್ರಿಯಾ
ವಿವಾದಾತ್ಮಕ ಸ್ವಾಮೀಜಿ ನಿತ್ಯಾನಂದನಿಗೆ ಭಕ್ತರಷ್ಟೆ ಅಭಿಮಾನಿಗಳಿದ್ದಾರೆ.
ಕೆಲವು ಕೇಸ್ ನಲ್ಲಿ ಆರೋಪಿಯಾಗಿರುವ ನಿತ್ಯಾನಂದ ದೇಶವನ್ನು ಬಿಟ್ಟೋಗಿದ್ದು, ಕೈಲಾಸ ಎಂದ ದ್ವೀಪದಲ್ಲಿ ವಾಸ ಮಾಡುತ್ತಿದ್ದಾರೆ.
ಇತ್ತೀಚೆಗೆ ನಿತ್ಯಾನಂದ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಸುದ್ದಿ ಹರಿದಾಡಿತ್ತು.
ಇದು ಹೀಗಿದ್ದರೇ ನಟಿ ಪ್ರಿಯಾ ಆನಂದ್ ನಿತ್ಯಾನಂದನನ್ನು ಮದುವೆ ಮಾಡಿಕೊಳ್ಳಬೇಕೆಂಬ ಕೋರಿಕೆಯನ್ನು ಹೊರ ಹಾಕಿದ್ದಾರೆ.
ಕಾಲಿವುಡ್ ನ ವಾಮನನ್ ಚಿತ್ರದಲ್ಲಿ ಕಾಣಿಸಿಕೊಂಡ ಪ್ರಿಯಾ ನಂತರ ಶಿವಕಾರ್ತಿಕೇಯನ್, ವಿಕ್ರಮ್ ಪ್ರಭು, ಗೌತಮ್ ಕಾರ್ತಿಕ್ ಸೇರಿದಂತೆ ಹಲವು ಸಿನಮಾಗಳಲ್ಲಿ ನಟಿಸಿದ್ದಾರೆ.

ಕನ್ನಡದ ಹಲವು ಸಿನಿಮಾಗಳಲ್ಲೂ ಕೂಡ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಒಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮದುವೆ ವಿಚಾರವಾಗಿ ಅವರು ಮಾತನಾಡಿದ್ದಾರೆ.
ಅವರು ನಿತ್ಯಾನಂದನನ್ನು ಮದುವೆ ಮಾಡಿಕೊಳ್ಳಬೇಕು ಎಂದುಕೊಂಡಿರುವುದಾಗಿ ತಿಳಿಸಿದ್ದಾಎ.
ಅವರ ಬಗ್ಗೆ ಸಾಕಷ್ಟು ವಿವಾದಗಳಿವೆ, ಆದ್ರೂ ಅವರನ್ನ ಸಾಕಷ್ಟು ಮಂದಿ ಆರಾಧಿಸುತ್ತಿದ್ದಾರೆ.
ಅವರನ್ನ ಮದುವೆಯಾದ್ರೆ ನನ್ನ ಹೆಸರನ್ನು ಬದಲಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹಾಸ್ಯ ಮಾಡಿದ್ದಾರೆ.








