ಯುಪಿ ಚುನಾವಣೆಗೆ ಕಾಂಗ್ರೆಸ್ ನಿಂದ ಭರವಸೆಗಳ ಸುರಿಮಳೆ – ರೂ. 10 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ – ಪ್ರಿಯಾಂಕಾ ಆಶ್ವಾಸನೆ
ಉತ್ತರಪ್ರದೇಶ : 2022ಕ್ಕೆ ನಡೆಯಲಿರುವ ಉತ್ತರಪ್ರದೇಶ ಚುನಾವಣಾ ಕಾವು ಈಗಿನಿಂದಲೇ ರಂಗೇರುತ್ತಿದ್ದು, ಬಿಜೆಪಿ , ಕಾಂಗ್ರೆಸ್ , ಬಿಎಸ್ ಪಿ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನ ಮಾಡುತ್ತಾ ಆಶ್ವಾಸನೆಗಳನ್ನ ನೀಡುತ್ತಾ ಭರ್ಜರಿ ಪ್ರಚಾರ ಆರಂಭಿಸಿವಿ. ಇತ್ತೀಚೆಗೆ ಪ್ರತಿಜ್ಞಾ ಯಾತ್ರೆಗೆ ಚಾಲನೆ ನೀಡಿದ್ದ ಪ್ರಿಯಾಂಕಾ ಅವರು ರೈತರ ಸಾಲ ಮನ್ನಾ, 20 ಲಕ್ಷ ಜನರಿಗೆ ಉದ್ಯೋಗ ಸೇರಿ 7 ಭರವಸೆಗಳನ್ನು ನೀಡಿದ್ದರು. ಈ ನಡುವೆ ಕಾಂಗ್ರೆಸ್ ಆಶ್ವಾಸನೆಗಳು ವಿರೋಧ ಪಕ್ಷಗಳ ನಿದ್ದೆ ಕೆಡಿಸುತ್ತಿವೆ.
ಹೌದು.. ಕಾಂಗ್ರೆಸ್ ಅನೇಕ ಭರವಸೆಗಳನ್ನ ನೀಡ್ತಿದ್ದು, ಜನರು ಕೂಡ ಪ್ರಭಾವಿತರಾಗ್ತಾಯಿದ್ದಾರೆ. ಈ ನಡುವೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಅವರು ತಮ್ಮ ಪಕ್ಷ ಆಡಳಿತಕ್ಕೆ ಬಂದ್ರೆ ರಾಜ್ಯದ ಜನರಿಗೆ 10 ಲಕ್ಷದರೆಗೂ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ ಅವರು ಕೋವಿಡ್ ಪಿಡುಗಿನ ಅವಧಿಯಲ್ಲಿ ರಾಜ್ಯದ ಆರೋಗ್ಯ ವ್ಯವಸ್ಥೆ ಹೇಗಿತ್ತು ಎಂದು ಎಲ್ಲರೂ ನೋಡಿದ್ದಾರೆ. ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ. ಈ ಹಿನ್ನೆಲೆಯಲ್ಲಿ ಜನರಿಗೆ ಉತ್ತಮ ಹಾಗೂ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವುದಕ್ಕಾಗಿ ನಮ್ಮ ಪಕ್ಷ ಅಧಿಕಾರಿಕ್ಕೆ ಬಂದರೆ ಚುನಾವಣಾ ಪ್ರಣಾಳಿಕೆ ಸಮಿತಿಯ ಒಪ್ಪಿಗೆಯೊಂದಿಗೆ 10 ಲಕ್ಷ ರೂಪಾಯಿಯವರೆಗೂ ಉಚಿತ ವೈದ್ಯಕೀಯ ಸೌಲಭ್ಯ ನೀಡಲು ಪಕ್ಷ ನಿರ್ಧರಿಸಿದೆ ಎಂದು ಭರವಸೆ ನೀಡಿದ್ದಾರೆ.
ಖತರ್ನಾಕ್ ಕಪಲ್ ನಿಂದ ಹನಿಟ್ರ್ಯಾಪ್ – 30 ಮಹಿಳೆಯರಿಂದ 300 ಮಂದಿಯಿಂದ ಕೋಟಿ ಕೋಟಿ ಸುಲಿಗೆ..!








