ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲಿರುವ ಪ್ರಿಯಾಂಕಾ – ನಿಕ್
ಸದ್ಯ ಹಾಲಿವುಡ್ ನಲ್ಲಿ ಮಿಂಚುತ್ತಿರುವ ಬಾಲಿವುಡ್ ನ ಸ್ಟಾರ್ ನಟಿ , ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಅಮೆರಿಕಾದ ಖ್ಯಾತ ಪಾಪ್ ಗಾಯಕ ನಿಕ್ ಜಾನಸ್ ಜೊತೆಗೆ ಮದುವೆಯಾಗಿ ಅಮೆರಿಕಾದಲ್ಲೇ ಪತಿ ಜೊತೆಗೆ ಸೆಟಲ್ ಆಗಿದ್ದಾರೆ…
ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.. ಅಷ್ಟೇ ಅಲ್ದೇ ಅನೇಕ ಖಾಸಗಿ ಶೋಗಳು , ಸಂದರ್ಶನಗಳಲ್ಲಿ ಭಾಗಿಯಾಗ್ತಿರುತ್ತಾರೆ.. ಇತ್ತೀಚೆಗೆ ಪಿಗ್ಗಿ ತಮ್ಮ ವಯಕ್ತಿಕ ಜೀವನದ ಬಗ್ಗೆ ತಮ್ಮ ಹಾಗೂ ಪತಿ ನಿಕ್ ಜೀವನದ ಬಹುದೊಡ್ಡ ಕನಸಿನ ಬಗ್ಗೆ ಮಾತನಾಡಿದ್ದರು.
ಸಂದರ್ಶನವೊಂದರಲ್ಲಿ ಭವಿಷ್ಯದಲ್ಲಿ ತಾವು ತಾಯಿಯಾಗುವುದರ ಬಗ್ಗೆ ಮಾತನಾಡಿದ್ದರು. ನಿಕ್ ಹಾಗೂ ಅವರ ಜೀವನದಲ್ಲಿ ಮಗು ಪಡೆಯುವುದೇ ಅತಿ ದೊಡ್ಡ ಕನಸು ಎಂದು ಹೇಳಿಕೊಂಡಿದ್ರು.. ದೇವರ ದಯೆಯಿಂದ ಅದು ಯಾವಾಗ ಸಂಭವಿಸುತ್ತದೋ ಆಗಲೇ ಸಂಭವಿಸಲಿ. ನಾನು ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೆನೆ. ನಮ್ಮ ಜೀವನದಲ್ಲಿ ಮಗು ಆಗಮನವಾಗುವ ಸಂದರ್ಭದಲ್ಲಿ ನಾನು ಚಿತ್ರರಂಗದಿಂದ ನಿಧಾನವಾಗಿ ಬ್ರೇಕ್ ತೆಗೆದುಕೊಳ್ಳಲು ಆರಂಭಿಸುತ್ತೇನೆ ಎಂದಿದ್ದರು..
ಆದ್ರೀಗ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ತಂದೆ, ತಾಯಿ ಆಗಲು ನಿರ್ಧರಿರುವುದಾಗಿ ಪ್ರಿಯಾಂಕಾ ಅವರು ಸಾಮಾಜಿಕ ಜಾಲತಾಣದ ಮೂಲಕ ಪ್ರಕಟ ಮಾಡಿದ್ದಾರೆ.
ಹೌದು ನಟಿಯ ಈ ಪೋಸ್ಟ್ ನಿಂದ ಅಭಿಮಾನಿಗಳು ಖುಷ್ ಆಗಿದ್ದಾರೆ. ಆದ್ರೆ ನಟಿ ಪ್ರಿಯಾಂಕಾ ಚೋಪ್ರಾ ಗರ್ಭಧರಿಸಿಲ್ಲ. ಮಗುವಿಗಾಗಿ ಗರ್ಭಧರಿಸುವುದೂ ಇಲ್ಲ. ಬದಲಿಗೆ ಈ ಜೋಡಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದು ಕೊಂಡು ತಂದೆ, ತಾಯಿ ಆಗಲು ನಿರ್ಧರಿಸಿದೆ. ಈ ಬಗ್ಗೆ ಪ್ರಿಯಾಂಕಾ ಮತ್ತು ನಿಕ್ ಪೋಸ್ಟ್ ಹಂಚಿಕೊಂಡಿದ್ದಾರೆ. ಇವರಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ..
ಪೋಸ್ಟ್ ನಲ್ಲಿ , ನಾನು ಬಾಡಿಗೆ ತಾಯ್ತನದ ಮೂಲಕ ನಮ್ಮ ಮಗುವನ್ನು ಸ್ವಾಗತಿಸುತ್ತಿದ್ದೇವೆ ಎನ್ನುವ ವಿಚಾರ ಹಂಚಿಕೊಳ್ಳಲು ಖುಷಿ ಆಗುತ್ತಿದೆ. ಈ ಸಮಯದಲ್ಲಿ ನಮ್ಮ ವೈಯಕ್ತಿಕ ವಿಚಾರವಾಗಿ ಸಮಯ ಕೊಡಿ ಎಂದು ಗೌರವಾನ್ವಿತವಾಗಿ ಕೇಳಿ ಕೊಳ್ಳುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಪ್ರಿಯಾಂಕಾ ಹಾಗೂ ನಿಕ್ ಜಾನಸ್ 2018ರಲ್ಲಿ ಭಾರತದ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆ ಆದರು. ಪ್ರಿಯಾಂಕ ಮತ್ತು ನಿಕ್ ಹಿಂದೂ ಮತ್ತು ಕ್ರಿಶ್ಚಿಯನ್ ಎರೆಡೂ ಸಂಪ್ರದಾಯದಂತೆ ಆಗಿದ್ದಾರೆ. ಈಗ ಮಗು ಪಡೆಯುವ ನಿರ್ಧಾರ ಮಾಡಿದ್ದಾರೆ.
ಇನ್ನೂ ಈ ಹಿಂದೆ ಅನೇಕ ನಟಿಯರು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನ ಪಡೆದಿದ್ದಾರೆ. ಶಿಲ್ಪಾ ಶೆಟ್ಟಿ, ಪ್ರೀತಿ ಜಿಂಟಾ, ಗೌರಿ ಖಾನ್ ಕೂಡ ಬಾಡಿಗೆ ತಾಯ್ತನದ ಮೊರೆ ಹೋಗಿದ್ದನ್ನ ನಾವಿಲ್ಲಿ ಗಮನಿಸಬಹುದು..








