ಪಿಗ್ಗಿ – ನಿಕ್ ಜೀವನದ ಬಹುದೊಡ್ಡ ಕನಸು… ಇದು ಈಡೇರಿದ್ರೆ ಸಿನಿಮಾದಿಂದ ಬ್ರೇಕ್..!!!
ಸದ್ಯ ಹಾಲಿವುಡ್ ನಲ್ಲಿ ಮಿಂಚುತ್ತಿರುವ ಬಾಲಿವುಡ್ ನ ಸ್ಟಾರ್ ನಟಿ , ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಅಮೆರಿಕಾದ ಖ್ಯಾತ ಪಾಪ್ ಗಾಯಕ ನಿಕ್ ಜಾನಸ್ ಜೊತೆಗೆ ಮದುವೆಯಾಗಿ ಅಮೆರಿಕಾದಲ್ಲೇ ಪತಿ ಜೊತೆಗೆ ಸೆಟಲ್ ಆಗಿದ್ದಾರೆ…
ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.. ಅಷ್ಟೇ ಅಲ್ದೇ ಅನೇಕ ಖಾಸಗಿ ಶೋಗಳು , ಸಂದರ್ಶನಗಳಲ್ಲಿ ಭಾಗಿಯಾಗ್ತಿರುತ್ತಾರೆg.. ಇತ್ತೀಚೆಗೆ ಪಿಗ್ಗಿ ತಮ್ಮ ವಯಕ್ತಿಕ ಜೀವನದ ಬಗ್ಗೆ ತಮ್ಮ ಹಾಗೂ ಪತಿ ನಿಕ್ ಜೀವನದ ಬಹುದೊಡ್ಡ ಕನಸಿನ ಬಗ್ಗೆ ಮಾತನಾಡಿದ್ದಾರೆ..
ಸಂದರ್ಶನವೊಂದರಲ್ಲಿ ಭವಿಷ್ಯದಲ್ಲಿ ತಾವು ತಾಯಿಯಾಗುವುದರ ಬಗ್ಗೆ ಮಾತನಾಡಿದ್ದಾರೆ. ಪ್ರಿಯಾಂಕಾಗೆ ತಮ್ಮ ತಾಯಿ ಮಧು ಚೋಪ್ರಾ ಅಜ್ಜಿಯಾಗಬೇಕೆಂದು ಆಶಿಸುತ್ತಿದ್ದಾರೇ ಎಂಬ ಪ್ರಶ್ನೆಯನ್ನು ಸಂದರ್ಶನವೊಂದರಲ್ಲಿ ಕೇಳಲಾಗಿತ್ತು. ಆಗ ಪ್ರಿಯಾಂಕಾ ನಗುತ್ತಲೇ, ಮಗು ಪಡೆದುಕೊಳ್ಳಬೇಕೆಂಬುದು ನಮ್ಮ ಜೀವನದ ಅತಿ ದೊಡ್ಡ ಕನಸಾಗಿದೆ.
ದೇವರ ದಯೆಯಿಂದ ಅದು ಯಾವಾಗ ಸಂಭವಿಸುತ್ತದೋ ಆಗಲೇ ಸಂಭವಿಸಲಿ. ನಾನು ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೆನೆ. ನಮ್ಮ ಜೀವನದಲ್ಲಿ ಮಗು ಆಗಮನವಾಗುವ ಸಂದರ್ಭದಲ್ಲಿ ನಾನು ಚಿತ್ರರಂಗದಿಂದ ನಿಧಾನವಾಗಿ ಬ್ರೇಕ್ ತೆಗೆದುಕೊಳ್ಳಲು ಆರಂಭಿಸುತ್ತೇನೆ ಎಂದಿದ್ದಾರೆ..
ಪ್ರಿಯಾಂಕಾ ಅವರು ಪಾಪ್ ಸ್ಟಾರ್ ನಿಕ್ ಜೋನಾಸ್ ಅವರನ್ನು 2018 ಡಿಸೆಂಬರ್ 1ರಂದು ವಿವಾಹವಾಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಪ್ರಿಯಾಂಕಾ ಅಮೆರಿಕದಲ್ಲಿ ನೆಲೆಸಿದ್ದಾರೆ.








