ನ್ಯಾಯಕ್ಕಾಗಿ ಮೋದಿಗೆ ಪತ್ರ ಬರೆದ ಪ್ರಿಯಾಂಕಾ ಗಾಂಧಿ..!
ನವದೆಹಲಿ: ಉತ್ತರ ಪ್ರದೇಶದಲ್ಲಿ ನಡೆದ ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನ್ಯಾಯ ಕೋರಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ನರೇಂದ್ರ ಅವರಿಗೆ ಪತ್ರ ಪರೆದಿದ್ದಾರೆ. ಈ ಬಗ್ಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ ಅವರು ಲಖಿಂಪುರ-ಖೇರಿ ರೈತರ ಮೇಲೆ ಜೀಪ್ ಗುದ್ದಿಸಿ ಕೆಳಗೆ ಬೀಳಿವಂತೆ ಮಾಡಿದ್ದು ಕೇಂದ್ರ ಗೃಹ ಖಾತೆ ಸಚಿವರ ಮಗ. ಉತ್ತರಪ್ರದೇಶ ಸರ್ಕಾರವು ರಾಜಕೀಯ ಒತ್ತಡಕ್ಕೆ ಒಳಗಾಗಿ ಮೃತರ ಕುಟುಂಬಕ್ಕೆ ನೀಡಬೇಕಾದ ನ್ಯಾಯದ ಸಿಕ್ಕಿಲ್ಲ ಎಂದು ಪ್ರಧಾನಿ ಅವರಿಗೆ ಪತ್ರ ಬರೆದಿದ್ದೇನು ಎಂದಿದ್ದಾರೆ.
ಅಲ್ಲದೇ ಮೃತ ರೈತರ ಕುಟುಂಬಕ್ಕೆ ನ್ಯಾಯ ಸಿಗಬೇಕು. ಹೀಗಾಗಿ ಮೋದಿಯವರು ಲಕ್ನೋದಲ್ಲಿ ನಡೆಯಲಿರುವ ಡಿಜಿಪಿ ಮತ್ತು ಐಜಿಪಿ ಸಮ್ಮೇಳನದಲ್ಲಿ ಭಾಗವಹಿಸಬಾರದು. ಮೋದಿ ಅವರಿಗೆ ನಿಜವಾಗಿಯೂ ರೈತರ ಕುರಿತಾಗಿ ಕಾಳಜಿ ಇದ್ದರೆ ಲಖಿಂಪುರ್ ಖೇರಿ ಪ್ರಕರಣ ಆರೋಪಿ ತಂದೆ ಅಜಯ್ ಮಿಶ್ರಾ ಜೊತೆಗೆ ವೇದಿಕೆ ಹಂಚಿಕೊಳ್ಳಬಾರದು. ಅಜಯ್ ಮಿಶ್ರಾ ಕೆಂದ್ರ ಗೃಹ ಖಾತೆಯ ರಾಜ್ಯ ಸಚಿವರಾಗಿ ಮಂದುವರಿದರೆ ರೈತ ಕುಟುಂಕ್ಕೆ ನ್ಯಾಯ ಸಿಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.








