“ನಾಡಿ ಅಧಿಕಾರಿ ಯಾತ್ರೆ” ಕೈಗೊಳ್ಳುವುದಾಗಿ ಪ್ರಿಯಾಂಕಾ (Priyanka Gandhi ) ಘೋಷಣೆ
ನವದೆಹಲಿ : ತೊಂದರೆಗೊಳಗಾಗಿರುವ ಸಮುದಾಯದ ಉದ್ದೇಶವನ್ನು ಬೆಂಬಲಿಸಿ ಪಕ್ಷವು “ನಾಡಿ ಅಧಿಕಾರಿ ಯಾತ್ರೆ” ಕೈಗೊಳ್ಳುವುದಾಗಿ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಘೋಷಣೆ ಮಾಡಿದ್ದಾರೆ
ಪ್ರಯಾಗ್ ರಾಜ್ ನಲ್ಲಿ ಪೊಲೀಸರಿಂದ ಹಾನಿಗೊಳಗಾದ ದೋಣಿಗಳು ಹಾಗೂ ಮೀನುಗಾರರನ್ನು ಪ್ರಿಯಾಂಕಾ ಭೇಟಿ ಮಾಡಿ ಅವರ ಅಹವಾಲು ಆಲಿಸಿದ್ದರು.
ಈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಿಯಾಂಕಾ, ಮೀನುಗಾರರಿಗೆ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ರು.
ಹಾಗೇ ತೊಂದರೆಗೊಳಗಾಗಿರುವ ಸಮುದಾಯದ ಉದ್ದೇಶವನ್ನು ಬೆಂಬಲಿಸಿ ಪಕ್ಷವು “ನಾಡಿ ಅಧಿಕಾರಿ ಯಾತ್ರೆ” ಕೈಗೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ.
ಇನ್ನು ನದಿ ಸಂಪನ್ಮೂಲಗಳ ಹಕ್ಕುಗಳು ಮೀನುಗಾರರಿಗೆ ಸೇರಿದ್ದಾಗಿದೆ. ಹೀಗಾಗಿ, ಅವರ ಹಕ್ಕುಗಳ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷ ಹೋರಾಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.