Hijab | ಬಿಕಿನಿಯಾದರೂ ಧರಿಸಲಿ, ಮುಸುಕು ಆದರೂ ಧರಿಸಲಿ.. ಹೆಣ್ಣು ಮಕ್ಕಳಿಗೆ ಹಕ್ಕಿದೆ priyanka Gandhi vadra reaction about hijab saaksha tv
ನವದೆಹಲಿ : ಬಿಕಿನಿಯಾದರೂ ಧರಿಸಲಿ, ಮುಸುಕು ಆದರೂ ಧರಿಸಲಿ, ಜೀನ್ಸ್ ಆದರೂ ಹಾಕಲಿ ಅಥವಾ ಹಿಜಾಬ್ ಆದರೂ ಹಾಕಲಿ. ಯಾವ ಬಟ್ಟೆ ಧರಿಸಬೇಕು ಎಂಬುದು ಹೆಣ್ಣು ಮಕ್ಕಳಿಗೆ ಬಿಟ್ಟಿದ್ದು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಉಡುಪಿ ಮೂಲದಲ್ಲಿ ಶುರುವಾದ ಹಿಜಾಬ್ ವಿವಾದ ರಾಜ್ಯದಲ್ಲಿ ವ್ಯಾಪಿಸಿ, ಇದೀಗ ದೇಶದಲ್ಲಿ ಎಲ್ಲಾ ಕಡೆಯೂ ಚರ್ಚೆಗೆ ಕಾರಣವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಿಯಾಂಕಾ ಗಾಂಧಿ ಟ್ವೀಟ್ ನಲ್ಲಿ.. ಯಾವ ಬಟ್ಟೆಯಾದ್ರೂ ಸರಿ. ಅದು ಬಿಕಿನಿಯಾಗಿರಲಿ, ಮುಸುಕು ಆದರೂ ಧರಿಸಿಲಿ, ಜೀನ್ಸ್ ಆದರೂ ಧರಿಸಿಲಿ. ಹೆಣ್ಣು ಮಕ್ಕಳಿಗೆ ಅವರಿಗೆ ಬೇಕಾದ ಉಡುಪು ಧರಿಸುವ ಹಕ್ಕಿದೆ. ಭಾರತದ ಸಂವಿಧಾನವೇ ಇಂತಹ ಹಕ್ಕು ನೀಡಿದೆ. ಮಹಿಳೆಯರಿಗೆ ಕಿರುಕುಳ ನೀಡುವುದನ್ನು ಮೊದಲು ನಿಲ್ಲಿಸಿ ಎಂದು ಒತ್ತಾಯಿಸಿದ್ದಾರೆ.