ನವದೆಹಲಿ : ರಾಜಸ್ಥಾನ ರಾಜಕೀಯದಲ್ಲಿ ಕ್ಷಿಪ್ರಗತಿಯ ಬೆಳವಣಿಗೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಡಿಸಿಎಂ ಸಚಿನ್ ಪೈಲಟ್ ಈಗ ಸೈಲೆಂಟ್ ಆಗಿದ್ದಾರೆ. ತನ್ನ ಹಿಂದೆ 25ಕ್ಕೂ ಹೆಚ್ಚು ಎಂಎಲ್ ಎಗಳು ಇದ್ದಾರೆ, ಗೆಹ್ಲೋಟ್ ಸರ್ಕಾರ ಮೈನಾರಿಟಿಯಲ್ಲಿದೆ ಎಂದಿದ್ದ ಸಚಿನ್ ಈಗ ಮನಸ್ಸು ಬದಲಿಸಿದ್ದಾರೆ.
ಜ್ಯೂ ಇಂದಿರಾ ರಂಗಪ್ರವೇಶ..

ಹೌದು..! ಇನ್ನೇನು ಸಚಿನ್ ಪೈಲಟ್ ಕಾಂಗ್ರೆಸ್ ಗೆ ರಾಜೀನಾಮೆ ನೀಡುತ್ತಾರೆ. ಅದರೊಂದಿಗೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ ಎಂದು ಹೇಳಲಾಗುತ್ತಿತ್ತು. ಆದ್ರೆ ಅಖಾಡಕ್ಕೆ ಜ್ಯೂನಿಯರ್ ಇಂದಿರಾ ಎಂಟ್ರಿಯಿಂದ ಎಲ್ಲಾ ರಾಜಕೀಯ ಲೆಕ್ಕಾಚಾರಗಳು ಉಲ್ಟಾ ಆಗಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಅಖಾಡಕ್ಕೆ ಇಳಿದು ಗೆಹ್ಲೋಟ್, ಪೈಲಟ್ ಮಧ್ಯೆ ಇದ್ದ ಗುದ್ದಾಟವನ್ನು ಶಮನ ಮಾಡಿದ್ದಾರೆ. ಈ ವೇಳೆ ಪೈಲಟ್ ಕೆಲ ಷರತ್ತುಗಳನ್ನು ಪ್ರಿಯಾಂಕಾ ಮುಂದೆ ಇಟ್ಟಿದ್ದಾರೆ.
ಸಚಿನ್ ಪೈಲಟ್ ಷರತ್ತುಗಳು
ಪಾರ್ಟಿ ಅಧ್ಯಕ್ಷರಾಗಿ ತಮ್ಮನ್ನೇ ಮುಂದುವರಿಸುವುದು.
ತಮ್ಮ ವರ್ಗಕ್ಕೆ ಸೇರಿದ ನಾಲ್ವರಿಗೆ ಮಂತ್ರಿಗಿರಿ
ಆರ್ಥಿಕ, ಗೃಹ ಖಾತೆಗಳನ್ನು ತಾನು ಹೇಳಿದವರಿಗೆ ನೀಡಬೇಕೆನ್ನುವುದು.

ಪೈಲಟ್ ರ ಕಂಡೀಷನ್ ಗಳ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆ ನಡೆಯುತ್ತಿದ್ದು, ಸದ್ಯಕ್ಕೆ ಸಚಿನ್ ಪೈಲಟ್ ಅಂತೂ ಸೈಲೆಂಟ್ ಆಗಿದ್ದಾರೆ. ಇದಕ್ಕೂ ಮುನ್ನ ರಾಜಸ್ಥಾನ ಕಾಂಗ್ರೆಸ್ ನಲ್ಲಿ ಭಾರಿ ಹೈಡ್ರಾಮ ನಡೆಯಿತು. ಮತ್ತೆ ಕೆಲ ಕಾಂಗ್ರೆಸ್ ಹಿರಿಯ ನಾಯಕರು, ಬಿಜೆಪಿ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಪ್ಲಾನ್ ಮಾಡುತ್ತಿದೆ ಎಂದು ಆರೋಪಿಸಿದ್ದರು.
ಬಂಡಾಯ ಬಾವುಟ ಹಾರಿಸಿದ್ದ ಸಚಿನ್ ಕಾಂಗ್ರೆಸ್ ಬಿಡೋದು ಪಕ್ಕಾ ಎಂದು ಹೇಳಲಾಗುತ್ತಿತ್ತು. ಆದ್ರೆ ಪ್ರಿಯಾಂಕಾ ಗಾಂಧಿ ವಾದ್ರಾ ಎಂಟ್ರಿಯಿಂದಾಗಿ ರಾಜಸ್ಥಾನ ಕಾಂಗ್ರೆಸ್ ನಲ್ಲಿ ಸದ್ಯಕ್ಕೆ ಶಾಂತಿ ನೆಲಸಿದ್ದು, ಗೆಹ್ಲೋಟ್ ಗೆ ಬೆಂಬಲ ನೀಡೋದಾಗೆ ಹೇಳಿದ್ದಾರಂತೆ ಸಚಿನ್ ಪೈಲಟ್.








