ಪ್ರಭು ಚವ್ಹಾಣ್ ಗೆ ಯಾವ ಭಾಷೆಯೂ ಬರಲ್ಲ : ಪ್ರಿಯಾಂಕ್ ಖರ್ಗೆ
ಯಾದಗಿರಿ : ಗುರುಮಠಕಲ್ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತ ಸಭೆಯಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ಪ್ರಭು ಚವ್ಹಾಣ್ ವಿರುದ್ಧ ಕಿಡಿಕಾರಿದ್ದಾರೆ. ಕಲ್ಯಾಣ ಕರ್ನಾಟಕದ ಭಾಗದ ಶಾಸಕರಲ್ಲಿ ಒಬ್ಬರೇ ಮಂತ್ರಿಯಾಗಿದ್ದು, ಅದು ಪ್ರಭು ಚವ್ಹಾಣ್. ಅವರಿಗೆ ಕನ್ನಡ, ಹಿಂದಿ, ಇಂಗ್ಲಿಷ್ ಸೇರಿ ಯಾವ ಭಾಷೆಯೂ ಸರಿಯಾಗಿ ಬರಲ್ಲ ಎಂದು ಟೀಕಿಸಿದ್ದಾರೆ.
ಗುರುಮಠಕಲ್ ಪಟ್ಟಣ ಕಾಂಗ್ರೆಸ್ ಪಕ್ಷದ ಕಚೇರಿ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಆಯೋಜನೆ ಮಾಡಲಾಗಿತ್ತು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಕಾಂಗ್ರೆಸ್ ಏನು ಮಾಡಿದೆ ಅಂತಾ ಕೇಳ್ತಾರೆ.
ಆರ್‍ಟಿಐ, ಆರ್‍ಟಿಎ, ಆರ್‍ಟಿಎಫ್, ಆಂಬುಲೆನ್ಸ್, ಆಹಾರ ಭದ್ರತೆ, ಕೃಷಿ ಸಾಲಮನ್ನಾ ಇವೆಲ್ಲಾ ಮಾಡಿದ್ದು ಕಾಂಗ್ರೆಸ್ ಸರ್ಕಾರವೇ ಹೊರತು ಈಗಿನ ಬಿಜೆಪಿ ಅಲ್ಲ. ಅವರು ಕೇವಲ ಅಧಿಕಾರಕ್ಕಾಗಿ ಕಿತ್ತಾಡುತ್ತಾರೆ.
ಆಪರೇಶನ್ ಕಮಲ, ಮೂವರು ಮುಖ್ಯಮಂತ್ರಿಗಳು. ಹೀಗೆ ಸರ್ಕಾರದ ಜವಾಬ್ದಾರಿ ಯಾರು ನಿಭಾಯಿಸುತ್ತಿದ್ದಾರೆ ಎನ್ನುವುದೇ ಅಲ್ಲಿ ಗೊಂದಲಮಯವಾಗಿದೆ ಎಂದು ಕಿಡಿಕಾರಿದರು.
ನಾನು ಬಂಡೆ ಅಲ್ಲ, ಯಾರನ್ನೂ ದ್ವೇಷ ಮಾಡಲ್ಲ : ಡಿಕೆಶಿ
ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಮಾತ್ರ ಅಭಿವೃದ್ದಿ ಕೆಲಸಗಳಾಗಲು ಸಾಧ್ಯ ಎಂದ ಪ್ರಿಯಾಂಕ್ ಖರ್ಗೆ, ರಾಜ್ಯ ಬಿಜೆಪಿ ಸರ್ಕಾರ ಕೊರೊನಾ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.
ಬೆಂಗಳೂರಿನಲ್ಲಿ ನೆಲಸಿದ್ದ ಈ ಭಾಗದ ಕೂಲಿ ಕಾರ್ಮಿಕರನ್ನು ಕಳುಹಿಸಲು ಎರಡು ಪಟ್ಟು ದುಡ್ಡು ವಸೂಲಿ ಮಾಡಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೆ ರೈತರ, ಕೂಲಿ ಕಾರ್ಮಿಕರ ಆದಾಯ ದುಪ್ಪಟ್ಟು ಮಾಡುವುದಾಗಿ ವಾಗ್ದಾನ ಮಾಡಿದ ಮೋದಿಗೆ, ದಿಲ್ಲಿಯಲ್ಲಿ ನಡೆಯುತ್ತಿರುವ ರೈತರನ್ನು ಭೇಟಿ ಮಾಡಲು ಸಮಯವಿಲ್ಲ ಎಂದು ಹರಿಹಾಯ್ದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









