priyanka
‘1980’ ರ ಕಾಲದ ಸಸ್ಪೆನ್ಸ್ ಥ್ರಿಲ್ಲರ್ ಕಹಾನಿಯಲ್ಲಿ ಪ್ರಿಯಾಂಕಾ..!
ಸ್ಯಾಂಡಲ್ ವುಡ್ ನಟಿ ಪ್ರಿಯಾಂಕಾ ಉಪೇಂದ್ರ ಅವರು ಸದ್ಯ ಸಾಲು ಸಾಲು ಪ್ರಾಜೆಕ್ಟ್ ಗಳಲ್ಲಿ ಬ್ಯುಇಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರ ಹೊಸ ಸಿನಿಮಾವಾದ ಕೈಮರಾ ಟೈಟಲ್ ಸಹ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಈ ಸಿನಿಮಾದ ಮತ್ತೊಂದು ವಿಸೇಷ ಅಂದ್ರೆ ಪ್ರಿಯಾಂಕಾ ಅವರ ಜೊತೆಗೆ ಪ್ರಿಯಾಮಣಿ ಹಾಗೂ ಛಾಯಾ ಸಿಂಗ್ ಕಾಣಿಸಿಕೊಳ್ತಾಯಿರೋದು. ಇದರ ನಡುವೆ ಲೈಫ್ ಈಸ್ ಬ್ಯೂಟಿಫುಲ್ ಚಿತ್ರದಲ್ಲೂ ನಟಿಸುತ್ತಿರುವ ಪ್ರಿಯಾಂಕಾ ಅವರು ಮತ್ತೊಂದು ಹೊಸ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೆ ಸಹಿ ಹಾಕಿದ್ದಾರೆ.
ಅಂದ್ಹಾಗೆ ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ಪೋಸ್ಟರ್ ಸಹ ರಿಲೀಸ್ ಆಗಿದೆ. ಈಗಾಗಲೇ ಕೈಗೆತ್ತಿಕೊಂಡಿರುವ ಚಿತ್ರಗಳ ಶೂಟಿಂಗ್ ಮಾಡುವುದರ ಜೊತೆ ಹೊಸ ಹೊಸ ಸಿನಿಮಾಗಳನ್ನು ಸಹ ಪ್ರಿಯಾಂಕಾ ಅವರು ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ, 1980 ಎಂಬ ರೆಟ್ರೋ ಸ್ಟೈಲ್ ಚಿತ್ರದಲ್ಲೂ ಪ್ರಿಯಾಂಕಾ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು.. 1980 ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಪ್ರಿಯಾಂಕಾ ಅವರು ಕಾನಿಸಿಕೊಳ್ತಾಯಿದ್ದು, ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ ಎನ್ನಲಾಗಿದೆ. ಮಡಿಕೇರಿಯಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಈ ಹಿನ್ನೆಲೆ ಪ್ರಿಯಾಂಕಾ ಅವರು ಕೂರ್ಗ್ಗೆ ಪಯಣ ಬೆಳೆಸಲಿದ್ದಾರೆ. ಸಿನಿಮಾ ರೆಟ್ರೋ ಸ್ಟೈಲ್ ನಲ್ಲಿ ಮೂಡಿ ಬರಲಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಪ್ರಿಯಾಂಕಾ ಜೊತೆಯಲ್ಲಿ ಅರವಿಂದ್ ರಾವ್, ಶ್ರೀಧರ್, ಮುರಳಿ ಶರ್ಮಾ ಮುಂತಾದವರು ನಟಿಸುತ್ತಿದ್ದಾರೆ. ಇನ್ನೂ ರಾಜ್ ಕಿರಣ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದೆ. ಅಂದ್ಹಾಗೆ ಈ ಚಿತ್ರದ ಮೂಲಕ ರಾಜ್ ಕಿರಣ್ ಅವರು ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಇನ್ನೂ ಈ ಹಿಂದೆ ಸವಾರಿ-2 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ ರಾಜ್ ಕಿರಣ್.
ಪುನೀತ್ ‘ಜೇಮ್ಸ್’ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ನಾಸಿರುದ್ದೀನ್ ಶಾ
ಲಾರೆನ್ಸ್ ಕೈಹಿಡಿದ ಬಾಲಿವುಡ್ “ಲಕ್ಷ್ಮೀ”..!
ಸೆಪ್ಟೆಂಬರ್ ನಲ್ಲಿ ಮದುವೆ, ನವೆಂಬರ್ ನಲ್ಲಿ ಪೂನಂ ಗರ್ಭಿಣಿಯಂತೆ..!
priyanka
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








