“ಅಪ್ಪು ಕನಸಿನ PRK ಅವರು ನೀಡಿದ ಸ್ಪೂರ್ತಿ ಉತ್ಸಾಹದ ಜೊತೆಗೆ ಪುನರಾರಂಭ”..!
ಬೆಂಗಳೂರು : ನಟ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದ ನೋವಿನಿಂದ ಈವರೆಗೂ ಚಿತ್ರರಂಗ ಹಾಗೂ ಅವರ ಕುಟುಂಬ ಹೊರಬಂದಿಲ್ಲ.. ಅವರಿಲ್ಲ ಅನ್ನೋ ಕಹಿ ಸತ್ಯ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ..ಈ ನಡುವೆ ಅವರು ನಡೆಸಿಕೊಂಡು ಹೋಗ್ತಿರು PRK ಆಡಿಯೋ ಸಂಸ್ಥೆ ಕಥೆಯೇನು ಎಂಬ ಪ್ರಶ್ನೆಯೂ ಎದ್ದಿತ್ತು.. ಈ ಬಗ್ಗೆ PRK ಟ್ವೀಟ್ ಮಾಡಿದ್ದು, ನಮಗೆ ಹಿಂದಿನದನ್ನು ಬದಲಿಸುವುದು ಅಸಾಧ್ಯವಾಗಿದೆ.
ಆದರೆ ಪುನೀತ್ ರಾಜ್ ಕುಮಾರ್ ರವರು ನಮಗೆ ನೀಡಿರುವ ಉತ್ಸಾಹ ಮತ್ತು ಸ್ಫೂರ್ತಿಯೊಂದಿಗೆ ಪಿ.ಆರ್.ಕೆ ಪ್ರೊಡಕ್ಷನ್ ಆಡಿಯೋದ ಮೂಲಕ ಉಜ್ವಲ ಭವಿಷ್ಯವನ್ನು ರಚಿಸಲು ಎದುರು ನೋಡುತ್ತೇವೆ. ನಮ್ಮ ಈ ಪ್ರಯಾಣವನ್ನು
ಹೊಸ ಮುಖಗಳಿಗೆ ಅವಕಾಶ ನೀಡುವ ಉದ್ದೇಶದಿಂದಲೇ ಈ ಸಂಸ್ಥೆ ಸ್ಥಾಪನೆ ಆಗಿತ್ತು. ಈ ಬ್ಯಾನರ್ ಅಡಿಯಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅಪ್ಪು ಅವಕಾಶ ನೀಡಿದ್ದರು. ಸಾಕಷ್ಟು ಸಿನಿಮಾಗಳನ್ನು ಪಿಆರ್ ಕೆ ಬ್ಯಾನರ್ ನಿರ್ಮಾಣ ಮಾಡಿ ಹೊಸ ಪ್ರತಿಭೆಗಳನ್ನ ಅನಾವರಣಗೊಳಿಸಿದೆ.